ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಲೇ ಇದೆ. ತೈಲ ಬೆಲೆ ಇಳಿಕೆಯನ್ನೇ ವಾಹನ ಸವಾರರು ಕಾತರದಿಂದ ಕಾಯುವಂತಾಗಿದೆ. ದೇಶದ ಬಹುತೇಕ ಕಡೆಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ. ಯಾವ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಅತ್ಯಂತ ಕಡಿಮೆ ಇದೆ ಅನ್ನೋದನ್ನು ನೋಡೋಣ.
ಕೇಂದ್ರ ಸರ್ಕಾರದ ಹೊರತಾಗಿ ರಾಜ್ಯ ಸರ್ಕಾರವೂ ಇಂಧನ ಬೆಲೆಯ ಮೇಲೆ ತೆರಿಗೆ ವಿಧಿಸುತ್ತದೆ. ಪ್ರತಿ ರಾಜ್ಯ ಸರ್ಕಾರವು ವಿಧಿಸುವ ತೆರಿಗೆ ಬದಲಾಗುತ್ತದೆ. ಹಾಗಾಗಿ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಒಂದು ಲೀಟರ್ ಪೆಟ್ರೋಲ್ ಮತ್ತು ಒಂದು ಲೀಟರ್ ಡೀಸೆಲ್ ಕಡಿಮೆ ಬೆಲೆಗೆ ದೊರೆಯುತ್ತಿರುವ 10 ರಾಜ್ಯಗಳ ಬಗ್ಗೆ ತಿಳಿಯೋಣ.
ಪ್ರತಿ ಲೀಟರ್ ಪೆಟ್ರೋಲ್ ಬೆಲೆ…
ಉತ್ತರ ಪ್ರದೇಶ- 96.53 ರೂ.
ದೆಹಲಿ- 96.72 ರೂ.
ಉತ್ತರಾಖಂಡ- 95.28 ರೂ.
ಅಸ್ಸಾಂ- 96.01 ರೂ.
ಗುಜರಾತ್- 96.31 ರೂ.
ಪಂಜಾಬ್ – 96.50 ರೂ.
ಹಿಮಾಚಲ ಪ್ರದೇಶ- 97.58 ರೂ.
ಹರಿಯಾಣ- 97.34 ರೂ.
ಜಮ್ಮು ಮತ್ತು ಕಾಶ್ಮೀರ – 99.81 ರೂ.
ಜಾರ್ಖಂಡ್- 99.81 ರೂ.
ಪ್ರತಿ ಲೀಟರ್ ಡೀಸೆಲ್ ಬೆಲೆ…
ಹಿಮಾಚಲ ಪ್ರದೇಶ- 83.36 ರೂ.
ಜಮ್ಮು ಮತ್ತು ಕಾಶ್ಮೀರ- 85.15 ರೂ.
ಅಸ್ಸಾಂ- 83.94 ರೂ.
ಕರ್ನಾಟಕ- 87.49 ರೂ.
ಪಂಜಾಬ್- 85.71 ರೂ.
ಉತ್ತರ ಪ್ರದೇಶ- 89.71 ರೂ.
ದೆಹಲಿ- 89.62 ರೂ.
ಉತ್ತರಾಖಂಡ- 90.29 ರೂ.
ಗುಜರಾತ್ – 92.06 ರೂ.
ಮಧ್ಯಪ್ರದೇಶ- 93.93 ರೂ.
ಭಾರತದಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ಬೆಲೆಗಳು ಬದಲಾಗುತ್ತವೆ. ಇಂಧನ ಬೆಲೆಗಳ ಪರಿಷ್ಕರಣೆಯ ವಿಧಾನವನ್ನು ಡೈನಾಮಿಕ್ ಆಯಿಲ್ ಪ್ರೈಸ್ ಎಂದು ಕರೆಯಲಾಗುತ್ತದೆ. ಈ ವಿಧಾನದಲ್ಲಿ ಜಗತ್ತಿನ ತೈಲ ಬೆಲೆಗಳಲ್ಲಿನ ಸಣ್ಣ ಬದಲಾವಣೆಗಳನ್ನು ಸಹ ಇಂಧನ ಖರೀದಿದಾರರು ಮತ್ತು ಪೂರೈಕೆದಾರರಿಗೆ ವರ್ಗಾಯಿಸಲಾಗುತ್ತದೆ. ಜಾಗತಿಕ ತೈಲ ಬೆಲೆಗಳು ಮತ್ತು ಕರೆನ್ಸಿ ವಿನಿಮಯ ದರಗಳಲ್ಲಿನ ಬದಲಾವಣೆಗಳ ಆಧಾರದ ಮೇಲೆ ಭಾರತದಲ್ಲೂ ತೈಲ ಬೆಲೆಗಳಲ್ಲಿ ವ್ಯತ್ಯಾಸವಾಗುತ್ತದೆ. ಚಿಲ್ಲರೆ ಬೆಲೆಯನ್ನು ನಿಗದಿಪಡಿಸಲು ತೈಲ ಮಾರುಕಟ್ಟೆ ಕಂಪನಿಗಳು ಕೇಂದ್ರ ಸರ್ಕಾರದ ಅನುಮೋದನೆಯನ್ನು ಪಡೆದಿವೆ.