alex Certify ಗೂಗಲ್​ ಮಾಹಿತಿ ಆಧಾರದಲ್ಲಿ ಓರ್ವ ವ್ಯಕ್ತಿ ಅಪರಾಧಿ ಎನ್ನುವುದು ಸರಿಯಲ್ಲ; ಕರ್ನಾಟಕ ಹೈಕೋರ್ಟ್​ ಅಭಿಮತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಗಲ್​ ಮಾಹಿತಿ ಆಧಾರದಲ್ಲಿ ಓರ್ವ ವ್ಯಕ್ತಿ ಅಪರಾಧಿ ಎನ್ನುವುದು ಸರಿಯಲ್ಲ; ಕರ್ನಾಟಕ ಹೈಕೋರ್ಟ್​ ಅಭಿಮತ

ಬೆಂಗಳೂರು: ಗೂಗಲ್​ ಹುಡುಕಾಟ ಮಾಡಿ ಅಲ್ಲಿ ನಮೂದಾಗಿರುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಯಾವುದೇ ವ್ಯಕ್ತಿ, ಅಪರಾಧಿಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್​ ಹೇಳಿದೆ. ಗೂಗಲ್​ನಲ್ಲಿ ಹುಡುಕಾಟ ನಡೆಸಿರುವುದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಇದರ ವಿಮರ್ಶೆಗಳನ್ನು ಬಳಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅಭಿಪ್ರಾಯ ಪಟ್ಟಿದ್ದಾರೆ.

ವಂಚನೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಓಂ ಪ್ರತಾಪ್ ಸಿಂಗ್ ಎಂಬುವರಿಗೆ ಜಾಮೀನು ಮಂಜೂರು ಮಾಡುವ ಮೂಲಕ ಕೋರ್ಟ್​ ಈ ತೀರ್ಪು ನೀಡಿದೆ. ಲಿಕ್ವಿಡ್ ಪ್ಯಾರಾಫಿನ್ ಪೂರೈಕೆದಾರ ಓಂ ಪ್ರತಾಪ್ ಸಿಂಗ್, ವ್ಯವಹಾರದಲ್ಲಿ ಮಹಿಳೆಯೊಬ್ಬರಿಗೆ ಮೋಸ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಹಿಳೆ ದೂರು ದಾಖಲು ಮಾಡಿದ್ದರು.

ಈತನ ಬಗ್ಗೆ ಗೂಗಲ್​ನಲ್ಲಿ ಹುಡುಕಿದಾಗ ಹಿಂದೆಯೂ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಕೇಸು ದಾಖಲು ಮಾಡಿದ್ದರು. ಕೇಸು ದಾಖಲಾಗುತ್ತಿದ್ದಂತೆಯೇ ತನ್ನನ್ನು ಪೊಲೀಸರು ಬಂಧಿಸಬಹುದು ಎಂದುಕೊಂಡು ಆತ ನಿರೀಕ್ಷಣಾ ಜಾಮೀನು ಕೋರಿ ಮೊದಲಿಗೆ ಸೆಷನ್ಸ್​ ಕೋರ್ಟ್​ ಮೊರೆ ಹೋಗಿದ್ದರು. ಅಲ್ಲಿ ಕೇಸ್​ ವಜಾ ಆಗಿತ್ತು. ಅದನ್ನು ಪ್ರಶ್ನಿಸಿ ಆತ ಹೈಕೋರ್ಟ್​ ಮೊರೆ ಹೋಗಿದ್ದರು.

ವಿಚಾರಣೆ ವೇಳೆ ವಕೀಲರು ಗೂಗಲ್​ ವಿಷಯವನ್ನು ಪ್ರಸ್ತಾಪಿಸಿದರು. ಆಗ ನ್ಯಾಯಮೂರ್ತಿಗಳು ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿ, ಜಾಮೀನು ನೀಡದಿರಲು ಯಾವುದೇ ಸಕಾರಣ ನಮಗೆ ತೋರುತ್ತಿಲ್ಲ ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...