ಬಳ್ಳಾರಿ: ಪತ್ನಿ ಶೀಲ ಶಂಕಿಸಿದ ವ್ಯಕ್ತಿ ಆಕೆಯನ್ನು ಕೊಂದು ನೇಣಿಗೆ ಶರಣಾದ ಘಟನೆ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಜಿಗೇನಹಳ್ಳಿಯಲ್ಲಿ ನಡೆದಿದೆ.
ರೇಖಾ ಹತ್ಯೆಯಾದವರು. ಕುಡುಗೋಲಿನಿಂದ ಹೊಡೆದು ಪತ್ನಿ ರೇಖಾ ಹತ್ಯೆ ಮಾಡಿದ ಪತಿ ಕುಮಾರಸ್ವಾಮಿ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚೋರನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.