ಗದಗ: ಕೃಷ್ಣನ ಆರಾಧಕರು ಯಾರಿಲ್ಲ ಹೇಳಿ. ಕೃಷ್ಣಂ ವಂದೇ ಜಗದ್ಗುರುಂ ಎಂಬ ಸಂಪ್ರದಾಯ ನಮ್ಮದು. ಇಂತಹ ಸಂಪ್ರದಾಯಕ್ಕೆ ಯಾರಾದರೂ ಅವಮಾನ ಮಾಡಿದರೆ ಹೇಗೆ. ಇಲ್ಲೊಂದು ಕಡೆ ಕೈ ಒರೆಸುವ ಟಿಶ್ಯೂ ಮೇಲೆ ಕೃಷ್ಣನ ಫೋಟೋ ಹಾಕಲಾಗಿದೆ.
ಹೌದು, ಈ ಘಟನೆ ನಡೆದಿರೋದು ಗದಗ-ಬೆಟಗೇರಿ ಅವಳಿ ನಗರದಲ್ಲಿ. ಇಲ್ಲಿನ ಒಂದಿಷ್ಟು ಭಾಗದಲ್ಲಿ ಕೃಷ್ಣನ ಫೋಟೋ ಪ್ರಿಂಟ್ ಆಗಿರುವ ಟಿಶ್ಯೂವನ್ನು ಗ್ರಾಹಕರಿಗೆ ನೀಡುತ್ತಿದ್ದಾರೆಂದು ತಿಳಿದ ವಿ.ಎಚ್.ಪಿ. ಹಾಗೂ ಭಜರಂಗದಳ ಕಾರ್ಯಕರ್ತರು ಇದು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಮಾಡಿದ್ದಾರೆ. ರಾಜ್ ಟ್ರೇಡರ್ಸ್ ಎಂಬ ಕಂಪನಿ ಈ ಕೆಲಸ ಮಾಡ್ತಾ ಎಂದು ಗೊತ್ತಾಗಿದೆ. ಇಲ್ಲಿನ ಬಸವೇಶ್ವರ ಸರ್ಕಲ್ ಬಳಿಯ ಈ ಟ್ರೇಡರ್ಸ್ ಮೇಲೆ ದಾಳಿ ಮಾಡಿದ್ದಾರೆ.
ದಾಳಿ ವೇಳೆ ಅಪಾರ ಪ್ರಮಾಣದ ಕೃಷ್ಣನ ಫೋಟೋ ಇರುವ ಟಿಶ್ಯೂ ಪೇಪರ್ ಪತ್ತೆಯಾಗಿವೆ. ಇದನ್ನು ನೋಡಿದ ಬಳಿಕ ವಿ.ಎಚ್.ಪಿ ಹಾಗೂ ಭಜರಂಗದಳ ಕಾರ್ಯಕರ್ತರು ಈ ಕಂಪನಿ ಮಾಲೀಕ ಇಂದ್ರಮಲ್ಲ ಜೈನ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇನ್ನು ವಿಷಯ ತಿಳಿದ ಶಹರ ಪೊಲೀಸರು ಭೇಟಿ ನೀಡಿ ಅಂಗಡಿ ಬೀಗ ಹಾಕಿಸೋದ್ರ ಜೊತೆಗೆ ಮಾಲೀಕ ಇಂದ್ರಮಲ್ಲನ್ನು ಠಾಣೆಗೆ ಕರೆದ್ಯೊಯ್ದಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಜ್ ಟ್ರೇಡರ್ಸ್ ಮಾಲೀಕ ಇಂದ್ರಮಲ್ಲ, ಲಾಟ್ನಲ್ಲಿ ತರಿಸಿದ್ದೇವೆ ನಾನು ಕೃಷ್ಣನ ಫೋಟೋ ಇದ್ದಿದ್ದು ನೋಡಿಲ್ಲ. ಈ ಲಾಟ್ ಬೆಂಗಳೂರಿನಿಂದ ತರಿಸಲಾಗಿದೆ. ಇದರಲ್ಲಿ ನಮ್ಮದೇನು ತಪ್ಪಿಲ್ಲ ಅಂತ ಕ್ಷಮೆ ಕೇಳಿದ್ದಾನೆ.