ಚಿತ್ರದುರ್ಗ: ಮುರುಘಾ ಮಠದ ವಸತಿ ಶಾಲೆಯಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದ್ದು, ಅನಧಿಕೃತವಾಗಿ ಹೆಣ್ಣು ಮಗುವನ್ನು ಪೋಷಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಬಯಲಾಗಿದೆ. ಚಿಗುರು ಹೆಸರಿನ ಮಗು ಮುರುಘಾಶ್ರೀಗೆ ಜನಿಸಿದ ಮಾಹಿತಿ ಇದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಸಾಮಾಜಿಕ ಕಾರ್ಯಕರ್ತ ಮಧುಕುಮಾರ್ ಒತ್ತಾಯಿಸಿದ್ದಾರೆ.
ಮಗುವಿನ ಡಿಎನ್ಎ ಪರೀಕ್ಷೆ ನಡೆಸಬೇಕು. ಈ ಮಗು ಸ್ವಾಮೀಜಿಗೆ ಜನಿಸಿದ ಮಾಹಿತಿಯಿದ್ದು, ರಸ್ತೆ ಸಮೀಪ ಮಗುವನ್ನು ಇಟ್ಟು ಅದನ್ನು ಮಠಕ್ಕೆ ತೆಗೆದುಕೊಳ್ಳುವ ಡ್ರಾಮಾ ನಡೆದಿರಬಹುದು. ಇಂತಹ ಹತ್ತಾರು ಮಕ್ಕಳನ್ನು ಅನಧಿಕೃತವಾಗಿ ಇರಿಸಿಕೊಂಡಿರುವ ಶಂಕೆ ಇದೆ ಎಂದು ಅವರು ಆರೋಪಿಸಿದ್ದಾರೆ.
ನಾಲ್ಕೂವರೆ ವರ್ಷದಿಂದ ಮಗು ಮಠದಲ್ಲಿದ್ದರೂ, ಜಿಲ್ಲಾಡಳಿತ, ಮಕ್ಕಳ ಕಲ್ಯಾಣ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದರೂ ಅಧಿಕಾರಿಗಳು ದೌರ್ಜನ್ಯ ನಡೆದಿಲ್ಲವೆಂದು ಹಿಂಬರಹ ನೀಡಿದ್ದಾರೆ. ಇಡೀ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.