ಸಮಾಜದಲ್ಲಿ ಆರ್ಥಿಕ ಅಸಮಾನತೆ ಸಾಕಷ್ಟಿದೆ. ಸೂರಿಲ್ಲದವರ ಸಂಖ್ಯೆ ಬಹಳವಿದ್ದರೆ, ಹೊತ್ತಿನ ಕೂಳಿಗೂ ಪರದಾಡುವವ ಸಂಖ್ಯೆಯೇನು ಕಡಿಮೆ ಇಲ್ಲ.
ಬಡವರ ಪ್ರತಿದಿನ ಹೋರಾಟಗಳನ್ನು ಚಿತ್ರಿಸುವಂತ ವಿಡಿಯೋ ಒಂದು ವೈರಲ್ ಆಗಿದ್ದು, ನೆಟ್ಟಿಗರು ಅದನ್ನು ಕಂಡು ಭಾವುಕರಾಗಿದ್ದಾರೆ. ಬಹಳಷ್ಟು ಲೈಕ್ ಗಳಿಸಿದ ಕ್ಲಿಪ್ ಹೃದಯವಿದ್ರಾವಕವಾಗಿದ್ದು, ಅನೇಕರ ಕಣ್ಣಲ್ಲಿ ನೀರು ತರಿಸಿರಲೂ ಸಾಕು.
ಜಿಂದಗಿ ಗುಲ್ಜಾರ್ ಹೈ ಹೆಸರಿನ ಟ್ವಿಟರ್ ಅಕೌಂಟ್ನಿಂದ ಅಪ್ಲೋಡ್ ಮಾಡಲಾದ 30 ಸೆಕೆಂಡ್ಗಳ ವಿಡಿಯೊದಲ್ಲಿ ಧಾರಾಕಾರ ಮಳೆಯ ನಡುವೆ ಭಿಕ್ಷುಕನಂತೆ ಕಾಣುವ ವ್ಯಕ್ತಿ ರಸ್ತೆ ಬದಿ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾದ ಸ್ಕೂಟರ್ಗ ಪೈಕಿ ಒಂದರ ಪಕ್ಕ ಕುಳಿತು ಊಟ ಮಾಡುವುದು ಕಾಣುತ್ತದೆ. ಭೀಕರ ಮಳೆಯಲ್ಲೂ ತಟ್ಟೆಯಲ್ಲಿದ್ದ ಆಹಾರವನ್ನು ತಿನ್ನುವುದನ್ನು ನೋಡಿದರೆ ಆತನ ಹಸಿವು ಎಷ್ಟೆಂದು ಅರ್ಥವಾಗುತ್ತದೆ.
ಭಾರೀ ಮಳೆಯ ಆರ್ಭಟಕ್ಕೆ ಊಟ ಒದ್ದೆಯಾಗದಂತೆ ರಕ್ಷಿಸಲು ಆ ವ್ಯಕ್ತಿ ಸ್ಕೂಟರ್ ಕೆಳಗೆ ಆಹಾರವನ್ನು ಇಟ್ಟುಕೊಂಡಿರುವುದನ್ನು ಕಾಣಬಹುದು. ಅನೇಕರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯಗಳನ್ನು ದಾಖಲು ಮಾಡಿದ್ದಾರೆ.