ವಂಚಕರು ಜನರನ್ನು ತಮ್ಮ ಮೋಸದ ಬಲೆಗೆ ಬೀಳಿಸಿಕೊಳ್ಳಲು ಎಂತೆಂಥ ಪ್ಲಾನ್ ಮಾಡುತ್ತಾರೆ ಎಂಬುದನ್ನು ತಿಳಿದರೆ ಅಚ್ಚರಿಯಾಗುತ್ತದೆ. ಹಾಗೆಯೇ ಮೋಸ ಹೋಗುವವರು ಇರುವವರೆಗೂ ಮೋಸ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಉತ್ತಮ ಉದಾಹರಣೆಯೊಂದು ಇಲ್ಲಿದೆ.
ಕೇರಳದ ಇಡುಕ್ಕಿಯಲ್ಲಿ ಈ ಘಟನೆ ನಡೆದಿದ್ದು ತಮಿಳುನಾಡಿನ ಯುವಕನೊಬ್ಬ, 25 ಲಕ್ಷ ರೂಪಾಯಿಗಳಂತೆ ಹುಲಿಮರಿಯನ್ನು ಮಾರಾಟ ಮಾಡುತ್ತೇನೆ ಎಂದು ವಾಟ್ಸಾಪ್ ಮೂಲಕ ಸಂದೇಶ ಹರಿ ಬಿಟ್ಟಿದ್ದಾನೆ. ಅಷ್ಟಕ್ಕೂ ಈತನ ಬಳಿ ಹುಲಿಮರಿಯೇ ಇರಲಿಲ್ಲ. ಬೆಕ್ಕಿನ ಮರಿಗೆ ಹುಲಿಯಂತೆ ಬಣ್ಣ ಬಳಿದು ಮಾರಾಟ ಮಾಡುವ ಸಂಚು ರೂಪಿಸಿದ್ದ.
ವಾಟ್ಸಾಪ್ ಸಂದೇಶ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಪಾರ್ಥಿಬನ್ ಎಂಬ ಈ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಇವರುಗಳ ಕೃತ್ಯ ಬೆಳಕಿಗೆ ಬಂದಿದೆ. ಈತನ ಜೊತೆ ಸ್ನೇಹಿತನೊಬ್ಬ ಸಹ ಇದ್ದು ಇದೀಗ ಆತನ ಬಂಧನಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.