ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಒಂದು, ಎರಡು ರೂ. ನಂತೆ ಏರಿಕೆಯಾಗುತ್ತಿದ್ದ ಅಕ್ಕಿದರ ಕಳೆದ ಎರಡು ತಿಂಗಳ ಅವಧಿಯಲ್ಲಿ ಕೆಜಿಗೆ ಎಂಟರಿಂದ ಹತ್ತು ರೂಪಾಯಿವರೆಗೆ ಏರಿಕೆಯಾಗಿದೆ.
ವಿದೇಶಗಳಿಗೆ ಹೆಚ್ಚಿನ ರಫ್ತು ಕಾರಣ ಅಕ್ಕಿ ಕೊರತೆ ಕಂಡು ಬಂದಿದೆ. ಉತ್ಪಾದನೆ ಕುಂಠಿತವಾಗಿದ್ದು, ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕಳೆದ ಎರಡು ತಿಂಗಳಲ್ಲಿ ಅಕ್ಕಿದರ ಶೇಕಡ 20ರಷ್ಟು ದುಬಾರಿಯಾಗಿದ್ದು, ಇದೇ ಮೊದಲ ಬಾರಿಗೆ ಕಡಿಮೆ ಅವಧಿಯಲ್ಲಿ ಪ್ರತಿ ಕೆಜಿಗೆ ಎಂಟರಿಂದ ಹತ್ತು ರೂಪಾಯಿ ಏರಿಕೆಯಾಗಿದೆ.
ಚಿಲ್ಲರೆ ದರದಲ್ಲಿ ಅಕ್ಕಿ ಬೆಲೆ ಈ ರೀತಿ ಏರಿಕೆಯಾಗಿದ್ದು, ಸ್ಟೀಮ್ ರೈಸ್ ದರ ಕೆಜಿಗೆ 38 ರಿಂದ 48 ರೂ., ಸೋನಾಮಸೂರಿ 52 ರಿಂದ 60 ರೂ., ದೋಸೆ ಅಕ್ಕಿ 30 ರಿಂದ 34 ರೂ., ಜೀರಾ ರೈಸ್ 110 ರಿಂದ 120 ರೂ.ಗೆ ಏರಿಕೆಯಾಗಿದೆ.