alex Certify ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲ್ಲ ರಷ್ಯಾ ಅಧ್ಯಕ್ಷ ಪುಟಿನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲ್ಲ ರಷ್ಯಾ ಅಧ್ಯಕ್ಷ ಪುಟಿನ್

ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ಅವರಿಗೆ ಅಂತಿಮ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ

ವೇಳಾಪಟ್ಟಿಯ ಸಮಸ್ಯೆಗಳಿಂದಾಗಿ ಕೊನೆಯ ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ಅವರ ಅಂತ್ಯಕ್ರಿಯೆಯಲ್ಲಿ ಪುಟಿನ್ ಅವರು ಭಾಗವಹಿಸುವುದಿಲ್ಲ ಎಂದು ಅವರ ವಕ್ತಾರರು ತಿಳಿಸಿದ್ದಾರೆ.

ವಿದಾಯ ಸಮಾರಂಭ ಮತ್ತು ಅಂತ್ಯಕ್ರಿಯೆಯು ಸೆಪ್ಟೆಂಬರ್ 3 ರಂದು ನಡೆಯಲಿದೆ. ಆದರೆ, ದುರದೃಷ್ಟವಶಾತ್ ಅಧ್ಯಕ್ಷರ ಕೆಲಸದ ವೇಳಾಪಟ್ಟಿ ಪ್ರಕಾರ ಅವರು ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸುದ್ದಿಗಾರರಿಗೆ ತಿಳಿಸಿದರು.

91 ನೇ ವಯಸ್ಸಿನಲ್ಲಿ ನಿಧನರಾದ ಗೋರ್ಬಚೇವ್ ಅವರಿಗೆ ಆಸ್ಪತ್ರೆಯಲ್ಲಿ ಪುಟಿನ್ ಅಂತಿಮ ನಮನ ಸಲ್ಲಿಸಿದ್ದಾರೆ. ಗೋರ್ಬಚೇವ್ ಅವರ ಅಂತ್ಯಕ್ರಿಯೆಯ ಸಮಾರಂಭ ಶನಿವಾರದಂದು ಮಾಸ್ಕೋ ಹಾಲ್ ಆಫ್ ಕಾಲಮ್‌ ನಲ್ಲಿ ನಡೆಯಲಿದೆ, ಐತಿಹಾಸಿಕವಾಗಿ 1953 ರಲ್ಲಿ ಜೋಸೆಫ್ ಸ್ಟಾಲಿನ್ ಸೇರಿದಂತೆ ಉನ್ನತ ನಾಯಕರ ಅಂತಿಮ ದರ್ಶನ, ಅಂತ್ಯಕ್ರಿಯೆ ಸೇವೆಗೆ ಈ ಸ್ಥಳ ಬಳಸಲಾಗಿದೆ.

ಗೋರ್ಬಚೇವ್ ಅವರನ್ನು ಮಾಸ್ಕೋದ ಪ್ರತಿಷ್ಠಿತ ನೊವೊಡೆವಿಚಿ ಸ್ಮಶಾನದಲ್ಲಿ 1999 ರಲ್ಲಿ ನಿಧನರಾದ ಅವರ ಪತ್ನಿ ರೈಸಾ ಅವರ ಪಕ್ಕದಲ್ಲಿ ಸಮಾಧಿ ಮಾಡಲಾಗುತ್ತದೆ.

ಗೋರ್ಬಚೇವ್ 20 ನೇ ಶತಮಾನದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಸೋವಿಯತ್ ನಾಯಕನಾಗಿ ಸುಧಾರಣೆಗಳು ದೇಶವನ್ನು ಪರಿವರ್ತಿಸಿತು. ಪೂರ್ವ ಯುರೋಪ್ ಸೋವಿಯತ್ ಆಳ್ವಿಕೆಯಿಂದ ಮುಕ್ತವಾಗಲು ಅವಕಾಶ ಮಾಡಿಕೊಟ್ಟಿತು.  ಸೋವಿಯತ್ ಪತನವನ್ನು 20 ನೇ ಶತಮಾನದ ಅತಿದೊಡ್ಡ ಭೌಗೋಳಿಕ ರಾಜಕೀಯ ದುರಂತ ಎಂದು ಪುಟಿನ್ ಹೇಳಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...