ನಾಡಿನಾದ್ಯಂತ ಇಂದು ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಸಂದರ್ಭದಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಸರ್ಕಾರ ಕರೆ ನೀಡಿದ್ದು, ಸಂಭ್ರಮಾಚರಣೆಯಿಂದ ಪರಿಸರಕ್ಕೆ ಹಾನಿ ಉಂಟಾಗದಿರಲಿ ಎಂದು ಹೇಳಿದೆ.
ಮಣ್ಣಿನಿಂದ ರೂಪಿಸಿದ ನೈಸರ್ಗಿಕ ಬಣ್ಣಗಳನ್ನು ಒಳಗೊಂಡ ಚಿಕ್ಕ ಮೂರ್ತಿಗಳನ್ನು ಖರೀದಿಸಿ, ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡಿದ ಗಣಪನ ವಿಗ್ರಹಗಳನ್ನು ಖರೀದಿಸಬೇಡಿ ಎಂದು ಹೇಳಲಾಗಿದೆ.
ಅಲಂಕಾರಕ್ಕೆ ಪ್ಲಾಸ್ಟಿಕ್ ಹೂವುಗಳು, ಧರ್ಮಕೋಲ್ ಅಥವಾ ಲೋಹಗಳನ್ನು ಬಳಸುವ ಬದಲು ಕೇವಲ ನೈಸರ್ಗಿಕ ಹೂವುಗಳು, ಹತ್ತಿ, ಪೇಪರ್ ಮತ್ತು ಇನ್ನಿತರ ಪರಿಸರ ಸ್ನೇಹಿ ಅಲಂಕಾರಿಕ ವಸ್ತುಗಳನ್ನು ಬಳಸಲು ಮನವಿ ಮಾಡಲಾಗಿದೆ.
ಕೆರೆ, ಹೊಂಡಗಳಲ್ಲಿ ಕೃತಕ ರಾಸಾಯನಿಕ ತೈಲ ಬಣ್ಣ ಲೇಪಿತ ಮೂರ್ತಿಗಳನ್ನು ವಿಸರ್ಜಿಸದಿರಲು ಮನವಿ ಮಾಡಲಾಗಿದ್ದು, ವಿಸರ್ಜನೆಗೂ ಮುನ್ನ ಹೂವು, ಎಲೆ ಮತ್ತು ಅಲಂಕಾರಿಕ ವಸ್ತುಗಳನ್ನು ಬೇರ್ಪಡಿಸುವಂತೆ ಸೂಚಿಸಲಾಗಿದೆ.