ಎಲೆಕ್ಟ್ರಿಕ್ ಮೋಟಾರ್ ಸೈಕಲ್, ಸ್ಕೂಟರ್, ಕಾರುಗಳಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್. ಅದರ ಜೊತೆಜೊತೆಗೆ ಎಲೆಕ್ಟ್ರಿಕ್ ಸೈಕಲ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ಕ್ಯಾಲಿಫೋರ್ನಿಯಾ ಕಂಪನಿಯೊಂದು ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಬಿಡುಗಡೆ ಮಾಡಿದೆ.
ಇದು ಫೋಲ್ಡ್ ಮಾಡಿ ಇಡಬಹುದಾದ ಎಲೆಕ್ಟ್ರಿಕ್ ಸೈಕಲ್. ಮಾಡೆಲ್ ಎಫ್ ಎಂದು ಇದಕ್ಕೆ ಹೆಸರಿಸಲಾಗಿದೆ. ಈ ಎಲೆಕ್ಟ್ರಿಕ್ ಸೈಕಲ್‌ನ ವಿಶೇಷತೆ ಏನೆಂದರೆ ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 80 ಕಿ.ಮೀ ದೂರ ಹೋಗಬಹುದು. ಅಲ್ಲದೆ ಇದನ್ನು ಮಡಚಿಕೊಂಡು ಎಲ್ಲಿಗೆ ಬೇಕಾದರೂ ಒಯ್ಯಬಹುದು.
ಬ್ಯಾಟರಿಯನ್ನು ಲಾಕ್ ಮಾಡುವ ಮೂಲಕ ಬೈಕ್‌ನಲ್ಲಿ ಇದನ್ನು ಚಾರ್ಜ್ ಮಾಡಬಹುದು. ಹಾಗೆಯೇ ಪ್ರತ್ಯೇಕವಾಗಿ ಚಾರ್ಜ್ ಮಾಡಲು ಅನ್‌ಲಾಕ್ ಮಾಡಬೇಕು. ಎಲೆಕ್ಟ್ರಿಕ್ ಬೈಕ್ ಪೆಡಲ್ ಅಸಿಸ್ಟ್ ಬಳಸಿ ಒಂದು ಬಾರಿ ಚಾರ್ಜ್ ಮಾಡಿದರೆ 80 ಕಿ.ಮೀ ಓಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ ನೀವು ಪೆಡಲಿಂಗ್ ಮಾಡದೆ ಎಲೆಕ್ಟ್ರಿಕ್ ಮೋಡ್‌ನಲ್ಲಿ ಮಾತ್ರ ಚಾರ್ಚ್ ಮಾಡಿದರೆ ಸೈಕಲ್ ಸುಮಾರು 40 ಕಿಮೀ ಓಡುತ್ತದೆ. ಇದು 750-ವ್ಯಾಟ್ ಮೋಟಾರ್ ಅನ್ನು ವಿದ್ಯುತ್ ಮೂಲವಾಗಿ ಪಡೆಯುತ್ತದೆ.
ಚಕ್ರವನ್ನು ಕಡಿಮೆ ಹಂತದ ಹೈಡ್ರೋಫಾರ್ಮ್ಡ್ ಅಲ್ಯೂಮಿನಿಯಂ ಚಾಸಿಸ್ನಲ್ಲಿ ನಿರ್ಮಿಸಲಾಗಿದೆ. ದೊಡ್ಡ ಕ್ರೂಸರ್ ಬೈಕ್‌ಗಳು 26 ಇಂಚಿನ ಚಕ್ರಗಳನ್ನು ಮತ್ತು ಸಣ್ಣ ಬೈಕ್‌ಗಳು 20 ಇಂಚಿನ ಚಕ್ರಗಳನ್ನು ಪಡೆಯುತ್ತವೆ. ಆದರೆ ಮಾಡೆಲ್ ಎಫ್ ಸೈಕಲ್‌ನಲ್ಲಿ 24 ಇಂಚಿನ ಚಕ್ರಗಳನ್ನು ಅಳವಡಿಸಲಾಗಿದೆ. ಟೈರುಗಳು ಮೂರು ಇಂಚು ಅಗಲವಾಗಿವೆ. ನಿಜವಾದ ಫ್ಯಾಟ್ ಟೈರ್‌ಗಳಿಗೆ ಹೋಲಿಸಿದರೆ ಮಾಡೆಲ್ ಎಫ್ ಟೈರ್‌ಗಳು ಬಲೂನ್ ಟೈರ್ ವಿಭಾಗದಲ್ಲಿ ಬರುತ್ತವೆ. ಈ ಸೈಕಲ್‌ನ ಬೆಲೆ 1799 ಡಾಲರ್ ಅಂದ್ರೆ ಸುಮಾರು 1,43,700 ರೂಪಾಯಿ.