ಗರ್ಭಿಣಿಯಾದ ನಂತ್ರ ಪ್ರತಿಯೊಂದು ದಿನ, ತಿಂಗಳು ಮಹತ್ವ ಪಡೆಯುತ್ತದೆ. ಗರ್ಭಿಣಿ ಹಾಗೂ ಸಾಮಾನ್ಯ ಮಹಿಳೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಗರ್ಭಿಣಿ ಆಹಾರದ ಜೊತೆಗೆ ಜೀವನ ಶೈಲಿಯಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
ಆರಂಭದ ಮೂರು ತಿಂಗಳು ಪ್ರತಿಯೊಂದರಲ್ಲೂ ಕಟ್ಟುನಿಟ್ಟಾಗಿರಬೇಕು. ಆದ್ರೆ ಅನೇಕ ಮಹಿಳೆಯರು ಈ ವಿಷಯವನ್ನು ನಿರ್ಲಕ್ಷಿಸುತ್ತಾರೆ. ಸಾಮಾನ್ಯ ಮಹಿಳೆಯಂತೆ ಇರಲು ಬಯಸ್ತಾರೆ. ಇದು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುವಿನ ಮೇಲೆ ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ಎಲ್ಲ ವ್ಯಕ್ತಿಗಳೂ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಸಂತೋಷ ಪಡೆಯುತ್ತಾರೆ. ಗರ್ಭಿಣಿಯಾದಾಗ ಶಾರೀರಿಕ ಸಂಬಂಧ ಬೆಳೆಸುವುದು ಉಳಿದ ಸಮಯಕ್ಕಿಂತ ಭಿನ್ನವಾಗಿರುತ್ತದೆ.
ಗರ್ಭ ಧರಿಸಿದ ನಂತ್ರ ಸಂಭೋಗದ ವೇಳೆ ಕಾಂಡೋಮ್ ಧರಿಸಬೇಕೇ ಬೇಡವೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಎರಡನೇ ಬಾರಿ ಗರ್ಭ ಧರಿಸಲು ಸಾಧ್ಯವಿಲ್ಲ ಹಾಗೇ ಯೋನಿಯಲ್ಲಿ ಸೋಂಕಾಗಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಅನೇಕರು ಕಾಂಡೋಮ್ ಬಳಸುವುದಿಲ್ಲ. ಆದ್ರೆ ಇದು ತಪ್ಪು ಕಲ್ಪನೆ. ಕಾಂಡೋಮ್ ಇಲ್ಲದೆ ಸಂಭೋಗ ಮಾಡಿದಲ್ಲಿ ಸಾಕಷ್ಟು ಅಪಾಯಗಳನ್ನು ಎದುರಿಸಬೇಕಾಗುತ್ತದೆ.
ಗರ್ಭಾವಸ್ಥೆಯಲ್ಲಿ ಕಾಂಡೋಮ್ ಇಲ್ಲದೆ ಶಾರೀರಿಕ ಸಂಬಂಧ ಬೆಳೆಸಿದಲ್ಲಿ ಎಸಿಡಿಟಿ, ಯೋನಿ ಸೋಂಕು ಕಾಣಿಸಿಕೊಳ್ಳುತ್ತದೆ. ತಾಯಿ-ಮಕ್ಕಳಿಬ್ಬರಿಗೂ ಅಪಾಯವಾಗುವ ಸಾಧ್ಯತೆ ಇರುತ್ತದೆ. ಯೋನಿಯೊಂದೇ ಅಲ್ಲ ದೇಹದ ಇತರ ಭಾಗಗಳಿಗೂ ಸೋಂಕು ತಗಲುವ ಅಪಾಯವನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಗರ್ಭಾವಸ್ಥೆಯಲ್ಲಿ ಕಾಂಡೋಮ್ ಇಲ್ಲದೆ ಶಾರೀರಿಕ ಸಂಬಂಧ ಬೆಳೆಸದಿರುವುದು ಸೂಕ್ತ.