ತಿರುವನಂತಪುರ: ಕೊರೊನಾ ಸೋಂಕು, ಡೆಂಗ್ಯೂವಿನಂತ ಸಾಂಕ್ರಾಮಿಕ ರೋಗಗಳ ನಡುವೆ ದೇಶಾದ್ಯಂತ ಮಕಿಪಾಕ್ಸ್ ಪ್ರಕರಣ ಹೆಚ್ಚುತ್ತಿದ್ದು, ಕೇರಳದಲ್ಲಿ ಇದೀಗ ಮತ್ತೊಂದು ಪ್ರಕರಣ ದೃಢಪಟ್ಟಿದೆ.
ಕೇರಳದ 7 ವರ್ಷದ ಬಾಲಕನಲ್ಲಿ ಮಂಕಿ ಪಾಕ್ಸ್ ದೃಢಪಟ್ಟಿದ್ದು, ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿತ ಬಾಲಕ ಇಂಗ್ಲೆಂಡ್ ನಿಂದ ಅಪ್ಪ-ಅಮ್ಮನ ಜತೆ ಕೇರಳಕ್ಕೆ ವಾಪಸ್ ಆಗಿದ್ದ. ಬಾಲಕನಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಆತನ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಲಾಜಿ ಸಂಸ್ಥೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಬಾಲಕನಲ್ಲಿ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದೆ.
ಈ ಮೂಲಕ ದೇಶದಲ್ಲಿ ಮಂಕಿಪಾಕ್ಸ್ ಸೋಂಕಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.