ನೆರೆಮನೆಯಾತನ ಗಿಳಿಯಿಂದ ವಿಪರೀತ ಕಿರಿಕಿರಿಯಾಗುತ್ತಿದೆ ಎಂದು ಆರೋಪಿಸಿ ವೃದ್ಧರೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇಂಥದೊಂದು ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಸುರೇಶ್ ಶಿಂಧೆ ಎಂಬ 75 ವರ್ಷದ ವೃದ್ಧ ದೂರು ನೀಡಿದವರಾಗಿದ್ದು, ಇವರ ನೆರೆಮನೆಯ ಅಕ್ಬರ್ ಅಮ್ಜದ್ ಖಾನ್ ಗಿಳಿ ಸಾಕಿದ್ದಾರಂತೆ. ಈ ಗಿಳಿ ಯಾವಾಗಲೂ ಕಿರುಚಾಡುತ್ತಾ ಇರುವ ಕಾರಣ ಸುರೇಶ್ ಅವರಿಗೆ ಮಾನಸಿಕ ಕಿರಿಕಿರಿಯಾಗಿದೆಯಂತೆ.
ಹೀಗಾಗಿ ಅಕ್ಬರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅವರು, ಹೇಗಾದರೂ ಮಾಡಿ ಈ ಗಿಳಿಯ ಕಿರಿಕಿರಿಯಿಂದ ಬಚಾವ್ ಮಾಡಿ ಎಂದು ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.