ಕೊಲಂಬಿಯಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಲ್ಲಿ ಅಥ್ಲೆಟ್ ಒಬ್ಬರು ಅಚ್ಚರಿಯ ಕಾರಣಕ್ಕೆ ರೇಸ್ ನಿಂದ ಹೊರಬೀಳುವಂತಾಗಿದೆ.
ಓಟದ ಮಧ್ಯದಲ್ಲಿ ಅವರ ಶಿಶ್ನ ಹೊರಬಂದ ನಂತರ ಅಥ್ಲೀಟ್ 400 ಮೀಟರ್ ರೇಸ್‌ನಿಂದ ಹೊರ ಬೀಳುವಂತಾಯಿತು.
ಇಟಲಿ ಮೂಲದ 18 ವರ್ಷದ ಆಲ್ಬರ್ಟೊ ನೊನಿನೊ ಕೊಲಂಬಿಯಾದ ಕ್ಯಾಲಿಯಲ್ಲಿ ನಡೆದ 400 ಮೀಟರ್ ಡೆಕಾಥ್ಲಾನ್‌ನಲ್ಲಿ ಸ್ಪರ್ಧಿಸಿದ್ದರು. ಅವರು ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಉತ್ತಮ ವೇಗ ಪಡೆದುಕೊಂಡು ಮುಂಚೂಣಿಯಲ್ಲಿದ್ದರು.
ಆರಂಭಿಕ ಹಂತದಲ್ಲಿ ಅವರು ಓಟವನ್ನು ಸುಲಭವಾಗಿ ಗೆಲ್ಲಬಹುದು ಎಂದು ಅಲ್ಲಿದ್ದ ಪ್ರೇಕ್ಷಕರಿಗೂ ಅನಿಸಿರಬಹುದು. ಆದರೆ ನಡುವೆ ಅವರ ಓಟದಲ್ಲಿ ಗಲಿಬಿಲಿಯುಂಟಾಯಿತು. ಆ ಸಮಯದಲ್ಲಿ ವೀಕ್ಷಕರಿಗೆ ಏನು ಯಡವಟ್ಟಾಗಿದೆ ಅನಿಸಿದರೂ ಏನೆಂದು ಗೊತ್ತಾಗಿರಲಿಲ್ಲ.
ನೋನಿನೊ ಅವರ ವೇಗವು ಸ್ವಲ್ಪ ಕಡಿಮೆಯಾಯಿತು, ಪ್ರತಿಸ್ಪರ್ಧಿಗಳು ಅವರನ್ನು ಹಿಂದಿಕ್ಕಲು ಅವಕಾಶ ಮಾಡಿಕೊಟ್ಟರು. ದುರದೃಷ್ಟವಶಾತ್ 51.57 ಸೆಕೆಂಡುಗಳ ಸಮಯದಲ್ಲಿ ಗುರಿ ತಲುಪಿ ಕೊನೆಯ ಸ್ಥಾನಿಯಾದರು.
ಆಲ್ಬರ್ಟೊ ನೊನಿನೊ ಶಿಶ್ನವು ಅವರ ಶಾರ್ಟ್ಸ್‌ನಿಂದ ಹೊರಬಂದ ಕಾರಣ ಅವರಿಗೆ ಓಡಲು ಅಡಚಣೆಯಾಯಿತು ಎಂದು ಕ್ರೀಡಾ ಪತ್ರಕರ್ತ ಡೇವಿಡ್ ಸ್ಯಾಂಚೆಜ್ ಡಿ ಕ್ಯಾಸ್ಟ್ರೊ ವರದಿ ಮಾಡಿದ್ದಾರೆ. ಈ ಘಟನೆಯು ಓಟದ ವೇಳೆ ಸರಿಯಾಗಿ ಓಡಲು ಅವಕಾಶ ನೀಡಲಿಲ್ಲ. 18 ವರ್ಷ ವಯಸ್ಸಿನ ಅಥ್ಲೀಟ್ ಸಮಸ್ಯೆಯನ್ನು ನಿಭಾಯಿಸಲು ಪ್ರಯತ್ನಿಸಿದರು ಆದರೆ ಕ್ಷಣದಲ್ಲಿ ಅವರ ಪರವಾಗಿ ಏನೂ ಕೆಲಸ ಮಾಡಲಿಲ್ಲ ಎಂದು ವಿವರಿಸಿದ್ದಾರೆ.