ಇಂಗು ತಿನ್ನುವುದರಿಂದ ಏನೆಲ್ಲಾ ʼಪ್ರಯೋಜನʼವಿದೆ ಗೊತ್ತಾ…..? 31-07-2022 12:37PM IST / No Comments / Posted In: Latest News, Health, Live News, Life Style ಇಂಗು, ತೆಂಗು ಇದ್ದರೆ ಮಂಗನೂ ಅಡಿಗೆ ಮಾಡುತ್ತದೆ ಎಂಬ ಗಾದೆ ಮಾತಿದೆ. ಇಂಗು ಬಳಸಿದರೆ ಅಡುಗೆಯ ರುಚಿ ಹೆಚ್ಚಾಗುತ್ತದೆ. ಹಾಗೇ ದೇಹದ ಕಾಯಿಲೆಗಳಿಗೆ ಇಂಗು ಮನೆ ಮದ್ದಾಗಿದೆ. ಹೀಗಾಗಿ ಅಡುಗೆಯಲ್ಲಿ ಇದನ್ನು ಬಳಸುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಇಂಗಿನ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ. * ಇಂಗು ತಿನ್ನುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ಹೊಟ್ಟೆ ಉಬ್ಬರದ ಸಮಸ್ಯೆ ಇದ್ದರೆ ಬೆಚ್ಚಗಿನ ನೀರಿನಲ್ಲಿ ಇಂಗು ಬೆರೆಸಿದ ನೀರನ್ನು ಕುಡಿದರೆ ಬೇಗನೆ ಮಾಯವಾಗುತ್ತದೆ. * ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ತಡೆಗಟ್ಟುವ ಸಾಮರ್ಥ್ಯವನ್ನು ಇದು ಹೊಂದಿದೆ. * ಉಸಿರಾಟದ ತೊಂದರೆ ಬಂದಾಗ ಕೂಡ ಸ್ವಲ್ಪ ಇಂಗನ್ನು ತಿಂದರೆ ಅಥವಾ ಬಿಸಿನೀರಿನಲ್ಲಿ ಕುಡಿದರೆ ಉಸಿರಾಟದ ತೊಂದರೆಯನ್ನು ಹೋಗಲಾಡಿಸಿ ಕೊಳ್ಳಬಹುದು. * ಬಿಸಿ ನೀರಿಗೆ ಸ್ವಲ್ಪ ಹಸಿ ಶುಂಠಿ, ಜೇನು, ಇಂಗನ್ನು ಬೆರೆಸಿ ಕುಡಿದರೆ ನಾಯಿ ಕೆಮ್ಮನ್ನು ತಡೆಗಟ್ಟಬಹುದು. * ಚಿಕ್ಕ ಮಕ್ಕಳಿಗೆ ಗಂಟಲು ಕಟ್ಟಿಕೊಂಡು ಕಫ ಹೆಚ್ಚಾದಾಗ ಸ್ವಲ್ಪ ಇಂಗು ತಿನ್ನಿಸಿದರೆ ಗುಣವಾಗುತ್ತದೆ. * ಮಾದಕ ವಸ್ತು ಸೇವನೆ ಮಾಡುವವರನ್ನು ಹೊರತರುವ ಶಕ್ತಿ ಇಂಗಿಗಿದೆ.