ಗರ್ಭಿಣಿಯರು ಶಾರೀರಿಕ ಸಂಬಂಧ ಬೆಳೆಸಬಹುದು. ತಜ್ಞರ ಪ್ರಕಾರ ಸಂಬಂಧ ಬೆಳೆಸುವ ಮುನ್ನ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಗರ್ಭಿಣಿ ಹಾರ್ಮೋನ್ ನಲ್ಲಿ ಸಾಕಷ್ಟು ಬದಲಾವಣೆಯಾಗಿರುತ್ತದೆ. ಸಣ್ಣ ನಿರ್ಲಕ್ಷ್ಯ ಕೂಡ ಮಗು ಹಾಗೂ ತಾಯಿ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಹಾಗಾಗಿ ಗರ್ಭಿಣಿಯರು ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಂಡು ಸಂಬಂಧ ಬೆಳೆಸಬೇಕು.
ಶಾರೀರಿಕ ಸಂಬಂಧ ಬೆಳೆಸುವ ವೇಳೆ ರಕ್ತಸ್ರಾವವಾದ್ರೆ ನಿರ್ಲಕ್ಷ್ಯ ಬೇಡ. ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.
ಸಂಗಾತಿ ಲೈಂಗಿಕ ಸಮಸ್ಯೆ ಅಥವಾ ರೋಗದಿಂದ ಬಳಲುತ್ತಿದ್ದರೆ ಗರ್ಭಿಣಿಯರು ಶಾರೀರಿಕ ಸಂಬಂಧ ಬೆಳೆಸದಿರುವುದು ಒಳ್ಳೆಯದು.
ಶಾರೀರಿಕ ಸಂಬಂಧದ ವೇಳೆ ಹೆಚ್ಚಿಗೆ ಒತ್ತಡ ನೀಡಬಾರದು. ಇದು ಗರ್ಭಿಣಿ ಹಾಗೂ ಮಗು ಇಬ್ಬರಿಗೂ ಅಪಾಯವಾಗುವ ಸಾಧ್ಯತೆಯಿರುತ್ತದೆ. ಗರ್ಭಪಾತಕ್ಕೂ ಕಾರಣವಾಗಬಹುದು.
ಶಾರೀರಿಕ ಸಂಬಂಧದ ವೇಳೆ ಕಾಂಡೋಮ್ ಬಳಸುವುದು ಬಹಳ ಮುಖ್ಯ. ಇದು ಸೋಂಕು ಹರಡದಂತೆ ತಡೆಯುತ್ತದೆ. ಹಾಗೆ ಸ್ವಚ್ಛತೆ ಬಗ್ಗೆ ಗಮನ ನೀಡಬೇಕಾಗುತ್ತದೆ.