ಮನು ಸ್ಮೃತಿಗೆ ಹಿಂದು ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಈ ಪೌರಾಣಿಕ ಗ್ರಂಥದಲ್ಲಿ ಆಚಾರ, ಪದ್ಧತಿ ಮತ್ತು ಸಂಸ್ಕಾರದ ಬಗ್ಗೆ ವಿವರವಾಗಿ ಹೇಳಲಾಗಿದೆ. ಸ್ತ್ರೀಯನ್ನು ಹೇಗೆ ಖುಷಿಯಾಗಿಟ್ಟುಕೊಳ್ಳಬೇಕೆಂಬ ಗುಟ್ಟನ್ನೂ ಮನು ಸ್ಮೃತಿಯಲ್ಲಿ ಹೇಳಲಾಗಿದೆ.
ಮನೆಯಲ್ಲಿರುವ ಮಹಿಳೆ ಸಂತೋಷವಾಗಿದ್ದರೆ ಕುಟುಂಬದಲ್ಲಿರುವ ಎಲ್ಲರೂ ಸುಖವಾಗಿದ್ದಂತೆ. ಸ್ತ್ರೀಯನ್ನು ಖುಷಿಯಾಗಿಡಲು ಮನು ಸ್ಮೃತಿಯಲ್ಲಿ ಮೂರು ಬಹು ಮುಖ್ಯ ಉಪಾಯಗಳನ್ನು ಹೇಳಲಾಗಿದೆ. ಆದ್ರೆ ಈ ಕಾಲದಲ್ಲಿ ಈ ಉಪಾಯಗಳಲ್ಲಿ ಸ್ವಲ್ಪ ಬದಲಾವಣೆ ತರಬೇಕಾಗುತ್ತದೆ.
ಮನು ಸ್ಮೃತಿಯ ಪ್ರಕಾರ ಯಾವ ಪುರುಷ ಹೆಂಡತಿ, ಅಮ್ಮ, ಸಹೋದರಿಗೆ ಒಳ್ಳೆಯ ಬಟ್ಟೆಯನ್ನು ನೀಡ್ತಾನೋ ಆ ಮನೆಯಲ್ಲಿ ಭಗವಂತ ಸದಾ ಪ್ರಸನ್ನನಾಗಿರುತ್ತಾನೆ. ಹಾಗಾಗಿ ಆ ಮನೆಯಲ್ಲಿ ಸುಖ- ಶಾಂತಿ ನೆಲೆಸಿರುತ್ತದೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗುತ್ತದೆ.
ಮಹಿಳೆಯರು ಆಭರಣ ಪ್ರಿಯರು. ಮನೆಯ ಮಹಿಳೆಗೆ ಪುರುಷನಾದವನು ಆಭರಣಗಳನ್ನು ಉಡುಗೊರೆಯಾಗಿ ನೀಡಬೇಕು. ಯಾವ ಮಹಿಳೆ ಒಳ್ಳೆಯ ಬಟ್ಟೆ ಹಾಗೂ ಆಭರಣ ಧರಿಸಿರುತ್ತಾಳೋ ಆ ಮನೆಯಲ್ಲಿ ಬಡತನ ಸುಳಿಯುವುದಿಲ್ಲ. ಆ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸಿರುತ್ತಾಳೆ.
ಮಹಿಳೆಯರಿಗೆ ಗೌರವ ನೀಡಬೇಕಾಗುತ್ತದೆ. ಪುರಾಣಗಳ ಪ್ರಕಾರ ಯಾವ ಮನೆಯಲ್ಲಿ ಮಹಿಳೆಗೆ ಗೌರವ ನೀಡುವುದಿಲ್ಲವೋ ಆ ಮನೆಯಲ್ಲಿ ಭಗವಂತ ಕೂಡ ನೆಲೆಸುವುದಿಲ್ಲವಂತೆ.