alex Certify ಭಾರತದಲ್ಲೇ ಇದೆ ವಿಶ್ವದ ಅತಿ ದೊಡ್ಡ ಆಲದ ಮರ: ದಂಗಾಗಿಸುತ್ತೆ ಅದರ ನೋಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲೇ ಇದೆ ವಿಶ್ವದ ಅತಿ ದೊಡ್ಡ ಆಲದ ಮರ: ದಂಗಾಗಿಸುತ್ತೆ ಅದರ ನೋಟ

ದೊಡ್ಡ ದೊಡ್ಡ ಕಾಡುಗಳಲ್ಲಿ ಬೃಹತ್‌ ಗಾತ್ರದ ಮರಗಳು ಇರುವುದು ಕಾಮನ್.‌ ಆದ್ರೆ ಭಾರತದಲ್ಲಿರುವ ಮರವೊಂದು ವಿಶ್ವ ದಾಖಲೆಯನ್ನೇ ಮಾಡಿದೆ. ಭಾರೀ ಗಾತ್ರದ ಆಲದ ಮರ ಇದು. ವಿಶ್ವದ ಅತಿದೊಡ್ಡ ಆಲದ ಮರ ಎಂದೇ ಇದನ್ನು ಕರೆಯಲಾಗುತ್ತದೆ. ಇದರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಇದನ್ನು ‘ದಿ ಗ್ರೇಟ್ ಬನಿಯನ್ ಟ್ರೀ’ ಎಂದೂ ಕರೆಯುತ್ತಾರೆ. ಈ ದೈತ್ಯ ಮರವು 250 ವರ್ಷಗಳಿಗಿಂತ ಹೆಚ್ಚು ಹಳೆಯದು.

ಈ ದೈತ್ಯ ಆಲದ ಮರ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಆಚಾರ್ಯ ಜಗದೀಶ್ ಚಂದ್ರ ಬೋಸ್ ಸಸ್ಯೋದ್ಯಾನವನದಲ್ಲಿದೆ. ಈ ಮರವನ್ನು 1787 ರಲ್ಲಿ ಇಲ್ಲಿ ನೆಡಲಾಯಿತು ಎಂದು ಹೇಳಲಾಗುತ್ತದೆ. ಆಗ ಅದರ ವಯಸ್ಸು 20 ವರ್ಷಗಳು. ಗ್ರೇಟ್ ಬನಿಯನ್ ಟ್ರೀ ಹಲವಾರು ಶಾಖೆಗಳನ್ನು ಮತ್ತು ಬೇರುಗಳನ್ನು ಹೊಂದಿದ್ದು ಅದು ಇಡೀ ಉದ್ಯಾನವನ್ನು ಆವರಿಸಿಕೊಂಡಿದೆ. ಈ ಮರವು ಎಷ್ಟು ದೊಡ್ಡದಾಗಿದೆ ಎಂದರೆ ಬೃಹತ್‌ ಕಾಡಿನಂತೆ ಕಾಣುತ್ತದೆ.

ಇದರ ಎತ್ತರ ಸುಮಾರು 24 ಮೀಟರ್ ಇದೆ. ಮರ 14,500 ಚದರ ಮೀಟರ್‌ಗಳಲ್ಲಿ ಹರಡಿದೆ. ಇದು 3 ಸಾವಿರಕ್ಕೂ ಹೆಚ್ಚು ಬಿಳಲುಗಳನ್ನು ಹೊಂದಿದ್ದು, ಅದೀಗ ಬೇರುಗಳಾಗಿ ಮಾರ್ಪಟ್ಟಿದೆ. ಈ ಕಾರಣಕ್ಕಾಗಿ ದೈತ್ಯ ಆಲದ ಮರವನ್ನು ‘ವಾಕಿಂಗ್ ಟ್ರೀ’ ಎಂತಲೂ ಕರೆಯಲಾಗುತ್ತದೆ. ಈ ದೈತ್ಯ ಆಲದ ಮರದಲ್ಲಿ 80ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ವಾಸಿಸುತ್ತವೆ. ಗಾತ್ರದಲ್ಲಿ ದೊಡ್ಡದಾಗಿರುವುದು ಮಾತ್ರವಲ್ಲ, ಅಷ್ಟೇ ಬಲವಾಗಿಯೂ ಇದೆ ಈ ಆಲದ ಮರ.

 

1884 ಮತ್ತು 1925ರ ಸೈಕ್ಲೋನಿಕ್ ಬಿರುಗಾಳಿಯಿಂದ ಸಹ ಈ ಮರಕ್ಕೆ ಯಾವುದೇ ಹಾನಿಯಾಗಲಿಲ್ಲ. ಈ ಬೃಹತ್ ಆಲದ ಮರವು ಶತಮಾನಗಳಿಂದ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಅದರ ಗೌರವಾರ್ಥವಾಗಿ ಭಾರತ ಸರ್ಕಾರವು 1987 ರಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಈ ಮರವನ್ನು ಭಾರತದ ಸಸ್ಯಶಾಸ್ತ್ರೀಯ ಸಮೀಕ್ಷೆಯ ಸಂಕೇತವೆಂದು ಪರಿಗಣಿಸಲಾಗಿದೆ.

ಈ ಆಲದ ಮರದ ಆರೈಕೆಗಾಗಿ ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿ 13 ಮಂದಿ ಇದ್ದಾರೆ. ಸಸ್ಯಶಾಸ್ತ್ರಜ್ಞರಿಂದ ಹಿಡಿದು ಗಾರ್ಡನ್‌ ಜವಾಬ್ಧಾರಿ ಹೊರುವವರು ಕೂಡ ಈ ಮರದ ಆರೈಕೆಯಲ್ಲಿ ತೊಡಗಿದ್ದಾರೆ. ಈ ಮರವನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...