alex Certify ಈ ಆಪ್ಟಿಕಲ್​ ಇಲ್ಯೂಷನ್​ ಚಿತ್ರದಲ್ಲಿರುವ ಡೈಮೆಂಡ್ ರಿಂಗ್​ ಕಂಡು ಹಿಡಿಯಬಲ್ಲಿರಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಆಪ್ಟಿಕಲ್​ ಇಲ್ಯೂಷನ್​ ಚಿತ್ರದಲ್ಲಿರುವ ಡೈಮೆಂಡ್ ರಿಂಗ್​ ಕಂಡು ಹಿಡಿಯಬಲ್ಲಿರಾ ?

ಆಪ್ಟಿಕಲ್​ ಇಲ್ಯೂಷನ್​ ಬಗ್ಗೆ ಗೊತ್ತಿರಬಹುದು, ಆಗಿಂದಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರನ್ನು ಯೋಚಿಸುವಂತೆ, ತಡಕಾಡುವಂತೆ ಮಾಡುವ ಇಮೇಜ್​ಗಳು ಬರುತ್ತಿರುತ್ತವೆ. ಇದು ಒಂದಷ್ಟು ಮನರಂಜನೆಗೂ ಕಾರಣವಾಗುತ್ತದೆ.

ಈಗ ಜನರು ಉದ್ಯಾನದ ಫೋಟೋದಲ್ಲಿ ವಜ್ರದ ಉಂಗುರ ಕಂಡು ಹಿಡಿಯುವ ಟಾಸ್ಕ್​ ಬಂದಿದೆ. ಇದರಲ್ಲಿ ಕೆಲವು ಸುಳಿವುಗಳಿವೆ, ಇದು ಉದ್ಯಾನದಲ್ಲಿ ಈ ವಜ್ರದ ಉಂಗುರವನ್ನು ಹುಡುಕಲು ನಿಮ್ಮ ಪ್ರಯತ್ನವನ್ನು ಸುಲಭಗೊಳಿಸುತ್ತದೆ. ಉದಾಹರಣೆಗೆ, ಈ ಉಂಗುರದ ಬ್ಯಾಂಡ್​ ಹಳದಿಯಾಗಿದ್ದು, ವಜ್ರವನ್ನು ಹೊಂದಿದೆ.

ಈ ಸುಳಿವುಗಳ ಹೊರತಾಗಿಯೂ, ಹೆಚ್ಚಿನವರು ವಜ್ರದ ಉಂಗುರವನ್ನು ಪತ್ತೆಹಚ್ಚಲು ಕಷ್ಟಪಡುತ್ತಾರೆ. ಕಾರಣ ಅದರ ನಿಯೋಜನೆ. ಇದನ್ನು ಕ್ಯಾರೆಟ್​ನ ಮೇಲ್ಭಾಗದಲ್ಲಿ ಇರಿಸಲಾಗಿದೆ, ಇದು ಪತ್ತೆಹಚ್ಚಲು ಅತ್ಯಂತ ತೀಕ್ಷ್ಣವಾದ ವೀಕ್ಷಣಾ ಕೌಶಲ್ಯ ಅಗತ್ಯವಿರುತ್ತದೆ. ಫೋಟೋದಲ್ಲಿ ಬಹಳಷ್ಟು ಕ್ಯಾರೆಟ್​ಗಳಿವೆ, ಇದು ಎಂತವರನ್ನೂ ಗೊಂದಲಗೊಳಿಸಬಹುದು.

ಇನ್ನೂ ಒಂದು ಕ್ಲೂ ಕೊಡಬೇಕೆಂದರೆ ಉಂಗುರವನ್ನು ಎಡಭಾಗದಿಂದ ಕ್ಯಾರೆಟ್​ ಮೇಲೆ ಇರಿಸಲಾಗಿದೆ. ಅದರ ಹತ್ತಿರ ಸೂರ್ಯಕಾಂತಿ ಮತ್ತು ಲಾರಿ ಕೂಡ ಇದೆ.

ಇದು ರೀಡರ್ಸ್​ ಡೈಜೆಸ್ಟ್​ ವೆಬ್​ಸೈಟ್​ನಲ್ಲಿ ನೀಡಲಾದ ಸಂಕೀರ್ಣ ಮತ್ತು ಆಸಕ್ತಿದಾಯಕ ಆಪ್ಟಿಕಲ್​ ಇಲ್ಯೂಷನ್​ ಮಾತ್ರವಲ್ಲದೇ ಕ್ಲೋಸೆಟ್​ನಲ್ಲಿ ಅಡಗಿರುವ ಚಿಟ್ಟೆ ಹುಡುಕುವ ಟಾಸ್ಕ್​ ಕೂಡ ಇದೆ. ಈ ಕ್ಲೋಸೆಟ್​ನಲ್ಲಿ ಸಾಕಷ್ಟು ಬಟ್ಟೆಗಳು ಚದುರಿಹೋಗಿವೆ, ಇದು ಹುಡುಕುವ ಕೆಲಸವನ್ನು ಹೆಚ್ಚು ಕಠಿಣಗೊಳಿಸುತ್ತದೆ. ತೀವ್ರ ಹುಡುಕಾಟದ ನಂತರ, ಟೋಪಿಯ ಹಿಂದೆ ಅಡಗಿರುವ ಚಿಟ್ಟೆಯನ್ನು ಕಂಡುಹಿಡಿಯಬಹುದು. ಈ ಎರಡು ಕಠಿಣ ಸವಾಲು ಪರಿಹರಿಸಿದ ನಂತರ ಇನ್ನೊಂದು ಸವಾಲು ಇದೆ. ಈ ಆಪ್ಟಿಕಲ್​ ಇಲ್ಯೂಷನ್​ನಲ್ಲಿ ಉದ್ಯಾನದಲ್ಲಿ ನಾಯಿಯನ್ನು ಹುಡುಕಬೇಕು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...