ಪರಸ್ಪರ ಮಾತನಾಡಿ….:ಡಿವೋರ್ಸ್‌ಗೆ ಬಂದ ಜೋಡಿಗೆ ನ್ಯಾಯಾಧಿಶರು ಕೊಟ್ಟ ಸಲಹೆ. ಅಯಾನ್ ಮತ್ತು ಬೆಲಾ (ಹೆಸರನ್ನ ಬದಲಾಯಿಸಲಾಗಿದೆ) ಇವರದ್ದು 8 ವರ್ಷಗಳ ಪ್ರೇಮವಿವಾಹ. ಉತ್ತಮ ಕುಟುಂಬ ಹಿನ್ನೆಲೆವುಳ್ಳ ಈ ಜೋಡಿ ಈಗ ವಿಚ್ಛೇದನ ಬೇಕು ಅಂತ ಕೋಲ್ಕತ್ತಾ ಕೋರ್ಟ್ ಮೆಟ್ಟಿಲು ಏರಿದ್ದಾರೆ.
ಇವರ ಮಧ್ಯೆ ಇದ್ದ ಅಸಲಿ ಸಮಸ್ಯೆ ಏನಂದ್ರೆ, ಇವರು ಒಬ್ಬರಿಗೋಸ್ಕರ ಇನ್ನೊಬ್ಬರು ಸಮಯವನ್ನ ಮೀಸಲಾಗಿಡುತ್ತಿರಲಿಲ್ಲ….. ಯಾವಾಗಲೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿ. ಅಷ್ಟೆ ಅಲ್ಲ ಇಬ್ಬರೂ ಒಬ್ಬರನ್ನೊಬ್ಬರು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದರು.
ಇದೇ ಕಾರಣಕ್ಕೆ ಈಗ ಇವರು ಒಟ್ಟಿಗೆ ಇರಲು ಸಾಧ್ಯವಾಗದೇ ವಿಚ್ಛೇದನ ನಿರ್ಧಾರಕ್ಕೆ ಬಂದಿದ್ದಾರೆ.
ಅಯಾನ್ ಇವರು ಸರ್ಕಾರಿ ಅಧಿಕಾರಿಯಾಗಿ ಹಾಗೂ ಬೆಲಾ ಇವರು 8 ವರ್ಷ ಐಟಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮದುವೆ ಆದ ಕೆಲವೇ ಕೆಲವು ತಿಂಗಳ ನಂತರ ಇವರಿಬ್ಬರ ನಡುವೆ ಉಂಟಾದ ಮನಸ್ಥಾಪದಿಂದಾಗಿ ಇಬ್ಬರೂ ಬೇರೆ-ಬೇರೆಯಾಗಿದ್ದರು. ಆದರೆ ಈಗ ಏಳು ವರ್ಷಗಳ ನಂತರ ಬೇಲಾ ಇವರು ಅಯಾಯ್ ವಿರುದ್ಧ ದೂರನ್ನ ಕೊಟ್ಟಿದ್ದಾರೆ.
BIG NEWS: ಕಳ್ಳನೆಂದು ಭಾವಿಸಿ ವ್ಯಕ್ತಿಯನ್ನೇ ಹತ್ಯೆಗೈದ ಸೆಕ್ಯೂರಿಟಿ ಗಾರ್ಡ್
ಮದುವೆ ಸಮಾರಂಭದಲ್ಲಿ ತೊಟ್ಟಿದ್ದ ಆಭರಣಗಳನ್ನ ಅಯಾನ್ ಕೊಟ್ಟಿಲ್ಲ ಅಂತ ಕಾರಣ ಕೊಟ್ಟು ಬೆಲಾ ದೂರು ದಾಖಲಿಸಿದ್ದಾರೆ. ಈ ಆರೋಪದಲ್ಲಿ ಸತ್ಯಾಂಶ ಇಲ್ಲ ಅಂತ ಹೇಳಿ ಅಯಾನ್ ಈ ಕೇಸ್ ರದ್ದುಗೊಳಿಸುವುದಕ್ಕಾಗಿ ಕೋರ್ಟಗೆ ಹೋಗಿದ್ದಾರೆ. ಈಗ ಈ ಪ್ರಕರಣ ನ್ಯಾಯಮೂರ್ತಿ ಕೌಶಿಕ್ ಚಂದಾ ಅವರ ಮುಂದಿದೆ.
ಈ ಪ್ರಕರಣವನ್ನ ಕೂಲಂಕುಶವಾಗಿ ಗಮನಿಸಿದ ನ್ಯಾಯಮೂರ್ತಿ ಕೌಶಿಕ್ ಚಂದಾ ಇವರು ಈ ಜೋಡಿಯನ್ನ ತಮ್ಮ ಕೋಣೆಗೆ ಕರೆದು ಇಬ್ಬರ ಸಮಸ್ಯೆಯನ್ನೂ ಆಲಿಸಿದ್ದಾರೆ. ಕೊನೆಗೆ ಇಬ್ಬರ ಮನಸ್ಸಿನಲ್ಲಿ ಇರುವ ಭಿನ್ನಾಭಿಪ್ರಾಯವನ್ನ ಗಮನಿಸಿದ ನ್ಯಾಯಮೂರ್ತಿ ಚಂದಾ ಇಬ್ಬರ ಗೊಂದಲಗಳನ್ನ ದೂರ ಮಾಡಿದ್ದಾರೆ. ಪರಿಣಾಮ ಇಬ್ಬರು ಮತ್ತೆ ಒಂದಾಗೋ ನಿರ್ಧಾರಕ್ಕೆ ಬಂದಿದ್ದಾರೆ. ನ್ಯಾಯಾಧೀಶರು, ಇಬ್ಬರೂ ಏಕಾಂತದಲ್ಲಿ ಒಟ್ಟಿಗೆ ಸಮಯ ಕಳೆಯಿರಿ, ಮನಸ್ಸು ಬಿಚ್ಚಿ ಮಾತನಾಡಿ ಅನ್ನೋ ಸಲಹೆಯನ್ನ ಕೂಡ ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ವಿಚ್ಛೇದನಕ್ಕೆ ಅಂತ ಬಂದವರು ತಮ್ಮ ನಿರ್ಧಾರವನ್ನ ಬದಲಿಸಿ ಒಟ್ಟಿಗೆ ಬದುಕಬೇಕು ಅನ್ನೋ ನಿರ್ಧಾರದೊಂದಿಗೆ ಹೊರಗೆ ಹೋಗಿದ್ದಾರೆ. ಇಂತಹ ಪ್ರಕರಣಗಳು ಅಪರೂಪದಲ್ಲೇ ಅಪರೂಪ.