ಮಾನವನ ದುರಾಸೆಗೆ ಕಾಡು ನಾಶವಾಗುತ್ತಿದ್ದು ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಅಲ್ಲದೆ ಅಭಿವೃದ್ಧಿ ಹೆಸರಿನಲ್ಲಿ ಕಾಡಿನಲ್ಲೂ ಸಹ ರಸ್ತೆ ನಿರ್ಮಾಣವಾಗತೊಡಗಿದ್ದು, ಇದು ಕಾಡು ಪ್ರಾಣಿಗಳ ಇರುವಿಕೆಗೆ ಸಮಸ್ಯೆಯಾಗುತ್ತಿದೆ.
ಆದರೆ ಕಾಡಿನ ನಡುವೆ ಸಂಚರಿಸುವ ವೇಳೆ ಮೈಯೆಲ್ಲಾ ಎಚ್ಚರಿಕೆಯಿಂದ ಇರಬೇಕು ಎಂಬುದಕ್ಕೆ ಈ ವಿಡಿಯೋ ನಿದರ್ಶನವಾಗಿದೆ. ಕಾಡಿನ ನಡುವೆ ಇರುವ ರಸ್ತೆಗಳಲ್ಲಿ ಸಂಚರಿಸುವಾಗ ಯಾವುದೇ ಕಾರಣಕ್ಕೂ ವಾಹನದಿಂದ ಇಳಿಯಬೇಡಿ ಎಂದು ಎಚ್ಚರಿಕೆಗಳನ್ನು ನೀಡುತ್ತಿದ್ದರೂ ಸಹ ಅದನ್ನು ನಿರ್ಲಕ್ಷಿಸುವವರಿಗೆ ಎಚ್ಚರಿಕೆಯ ಕರೆಗಂಟೆಯಂತಿದೆ ಈ ವಿಡಿಯೋ.
ವಿಡಿಯೋದಲ್ಲಿರುವಂತೆ ಕಾಡಿನಲ್ಲಿರುವ ರಸ್ತೆಯಲ್ಲಿ ಕಾರಿನಲ್ಲಿ ಸಂಚರಿಸುವ ವೇಳೆ ಚಾಲಕ ಮಧ್ಯದಲ್ಲಿ ಕಾರು ನಿಲ್ಲಿಸುತ್ತಾನೆ. ಆಗ ಯುವತಿಯೊಬ್ಬಳು ಸೀಟಿನಿಂದ ಇಳಿದು ಮತ್ತೊಂದು ಬದಿಯಿಂದ ಕಾರು ಏರಲು ಮುಂದಾಗುತ್ತಾಳೆ.
ಈ ವೇಳೆ ಅದೆಲ್ಲಿತ್ತೋ ಏನೋ ಹುಲಿಯೊಂದು ಹಠಾತ್ ದಾಳಿ ಮಾಡಿ ಆಕೆಯನ್ನು ಕಾಡಿನೊಳಗೆ ಎಳೆದೊಯ್ದಿದೆ. ಯುವತಿಯನ್ನು ರಕ್ಷಿಸಲು ಒಬ್ಬ ಕಾರಿನಿಂದ ಇಳಿದು ಬಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದರ ವಿಡಿಯೋ ಈಗ ವೈರಲ್ ಆಗಿದ್ದು ಆದರೆ ನೋಡುವ ಮುನ್ನ ಒಮ್ಮೆ ಯೋಚಿಸಿ.
https://twitter.com/RANDOMFACTS2022/status/1542914078573748226?ref_src=twsrc%5Etfw%7Ctwcamp%5Etweetembed%7Ctwterm%5E1542914078573748226%7Ctwgr%5E%7Ctwcon%5Es1_&ref_url=https%3A%2F%2Fvijaykarnataka.com%2Fviral-adda%2Fomg-news%2Fshocking-old-video-of-a-giant-tiger-dragged-a-woman-when-she-get-out-of-car-in-forest-area-is-again-going-viral-on-social-media%2Farticleshow%2F92644829.cms