ಸೂರ್ಯಾಸ್ತವನ್ನು ನೋಡಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸಮುದ್ರದ ಕಿನಾರೆಗಳಲ್ಲಿ, ಶಿಖರ ಪ್ರದೇಶಗಳಲ್ಲಿ ಸೂರ್ಯಾಸ್ತವನ್ನು ನೋಡಲು ಜನರು ಮುಗಿ ಬೀಳುತ್ತಾರೆ. ಆ ಕೆಂಬಣ್ಣದ ಸೂರ್ಯನನ್ನು ನೋಡುವುದೇ ಒಂದು ಆನಂದ. ಇತ್ತೀಚೆಗೆ ನ್ಯೂಯಾರ್ಕ್ ನಗರದ ಜನರು ವಿಚಿತ್ರ ರೀತಿಯಲ್ಲಿ ಇಂತಹ ಆನಂದವನ್ನು ಅನುಭವಿಸಿದ್ದಾರೆ.
ಹಾಗಾದರೆ, ಈ ಜನರು ಮಾಡಿರುವುದಾದರೂ ಏನು ಎಂದು ನೋಡಲು ಹೋದರೆ, ಇವರೆಲ್ಲಾ ವಾಹನಗಳನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ಸೂರ್ಯಾಸ್ತವನ್ನು ವೀಕ್ಷಿಸಿದ್ದಾರೆ. ಅಂದರೆ, ಟ್ರಾಫಿಕ್ ಜಾಮ್ ಮಾಡಿ ಸೂರ್ಯ ಮುಳುಗುವ ಆ ಕ್ಷಣವನ್ನು ಅನುಭವಿಸಿದ್ದಾರೆ. ನ್ಯೂಯಾರ್ಕ್ ನ ಮ್ಯಾನ್ಹಾಟನ್ ನ ರಸ್ತೆ ಈ ಘಟನೆಗೆ ಸಾಕ್ಷಿಯಾಗಿದ್ದು, ನೂರಾರು ನಾಗರಿಕರು ವಾಹನಗಳನ್ನು ನಿಲ್ಲಿಸಿ ಸೂರ್ಯಾಸ್ತವಾಗುವುದನ್ನು ವೀಕ್ಷಿಸಿದ್ದಲ್ಲದೇ, ಆ ಸುಂದರವಾದ ಚಿತ್ರ ಮತ್ತು ವಿಡಿಯೋವನ್ನು ತಮ್ಮ ಮೊಬೈಲ್ ಗಳಲ್ಲಿ ಕ್ಲಿಕ್ಕಿಸಿದ್ದಾರೆ.
ಸರಿಯಾಗಿ ಒಣಗದ ಬಟ್ಟೆಯಿಂದ ಕಮಟು ವಾಸನೆ ಬರುತ್ತಿದೆಯೇ….? ಇದನ್ನು ಹೋಗಲಾಡಿಸಲು ಇಲ್ಲಿದೆ ಟಿಪ್ಸ್
ಇದೇ ವೇಳೆ, ಯುವತಿಯೊಬ್ಬಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೂರ್ಯಾಸ್ತದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ನಿಂತು ಡ್ಯಾನ್ಸ್ ಮಾಡುತ್ತಿದ್ದುದು ಅಲ್ಲಿದ್ದವರಿಗೆ ಮತ್ತಷ್ಟು ವಿನೋದವನ್ನು ಉಂಟು ಮಾಡಿದೆ. ಸೂರ್ಯಾಸ್ತ ಮತ್ತು ಯುವತಿಯ ಡ್ಯಾನ್ಸ್ ನ ವಿಡಿಯೋವನ್ನು ಕಿರಾ ಎಂಬ ಮಹಿಳೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಇದು ಭಾರೀ ವೈರಲ್ ಆಗಿದೆ.
ಸೂರ್ಯಾಸ್ತವನ್ನು ನೋಡುತ್ತಾ ರಸ್ತೆಯಲ್ಲಿ ಕಿಕ್ಕಿರಿದು ತುಂಬಿದ್ದ ಜನರು ತಮ್ಮ ಮೊಬೈಲ್ ಗಳಲ್ಲಿ ಅದನ್ನು ಸೆರೆ ಹಿಡಿಯುತ್ತಿರುವ ದೃಶ್ಯಗಳನ್ನು ಕಿರಾ ಸೆರೆ ಹಿಡಿದಿದ್ದಾರೆ. ಇದಲ್ಲದೇ, ಸೂರ್ಯಾಸ್ತವನ್ನು ವೀಕ್ಷಿಸುವ ವೇಳೆ, ವಾಹನಗಳು ನಿಂತಲ್ಲೇ ನಿಂತು ಇಡೀ ಸಂಚಾರ ಕೆಲಕಾಲ ಸ್ತಬ್ಧಗೊಂಡಿತ್ತು.
ಈ ವಿಡಿಯೋವನ್ನು 10.7 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಇದನ್ನು ವೀಕ್ಷಿಸಿ ಅನೇಕ ನೆಟ್ಟಿಗರು ಗೊಂದಲ ಮತ್ತು ಕುತೂಹಲಗೊಂಡು, ನ್ಯೂಯಾರ್ಕ್ ನ ಜನರ ಆಸಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://twitter.com/katienichleire/status/1538984988913414167?ref_src=twsrc%5Etfw%7Ctwcamp%5Etweetembed%7Ctwterm%5E1538984988913414167%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpeople-stop-traffic-to-capture-beautiful-sunset-in-new-york-viral-video-has-over-10-million-views-1965061-2022-06-21