ಆಕರ್ಷಕ ಪಾದ ನಿಮ್ಮದಾಗಬೇಕೇ, ಎಂತಹ ಚಪ್ಪಲಿ ಧರಿಸಿದರೂ ನಿಮ್ಮ ಕಾಲು ಕೋಮಲವಾಗಿ, ಸುಕೋಮಲವಾಗಿ ಗೋಚರಿಸಬೇಕೇ? ಹಾಗಿದ್ದರೆ ಇಲ್ಲಿ ಕೇಳಿ.
ನಿಮ್ಮ ಕಾಲನ್ನು ಸ್ವಚ್ಛವಾಗಿ ತೊಳೆದು ಬಿಸಿ ನೀರಿನಲ್ಲಿ ಮುಳುಗಿಸಿಟ್ಟು ಹತ್ತು ನಿಮಿಷದ ಬಳಕ ಒಣಗಿಸಿ. ಮನೆಯಿಂದ ಹೊರಹೋಗುವಾಗ ಅದರಲ್ಲೂ ಬಿಸಿಲಿನಲ್ಲಿ ಹೋಗುವ ಸಂದರ್ಭವಿದ್ದರೆ ಸಾಕ್ಸ್ ಧರಿಸಿ. ಇದರಿಂದ ನಿಮ್ಮ ತ್ವಚೆಗೆ ನೇರವಾಗಿ ಸೂರ್ಯನ ಕಿರಣಗಳು ತಾಗುವುದಿಲ್ಲ.
ಹಾಲು ಹಾಗು ವಿನೆಗರ್ ನಿಂದ ಕಾಲಿನ ಮಾಸ್ಕ್ ತಯಾರಿಸಿ, ಹಚ್ಚಿಕೊಳ್ಳಿ. ಇದು ಚರ್ಮದ ಅನಗತ್ಯ ಅಥವಾ ಸತ್ತ ಜೀವಕೋಶಗಳನ್ನು ತೆಗೆದುಹಾಕಿ ತ್ವಚೆಯನ್ನು ಕಾಂತಿಯುತಗೊಳಿಸುತ್ತವೆ.
ಜೇನು ಹಾಗೂ ಹಾಲನ್ನು ಬೆರೆಸಿ ಆ ಪೇಸ್ಟನ್ನು ಕಾಲಿನಿಂದ ಮೊಳಕಾಲು ತನಕ ಹಚ್ಚುವುದರಿಂದ ಕಾಲಿನಲ್ಲಿರುವ ಅನಗತ್ಯ ಕೂದಲು ಉದುರಿಹೋಗುತ್ತದೆ. ಒಣಗಿರುವ ತ್ವಚೆಗೆ ಇದು ಜೀವಕಳೆ ತುಂಬುತ್ತದೆ.
ಮೃದುವಾದ ಹಿಮ್ಮಡಿ ಪಡೆಯಬೇಕಿದ್ದರೆ ರಾತ್ರಿ ಮಲಗುವ ಮುನ್ನ ಕಾಲನ್ನು ಸ್ವಚ್ಛವಾಗಿ ತೊಳೆದು ಬೆಣ್ಣೆ ಹಚ್ಚಿ. ಇದರಿಂದ ಹಿಮ್ಮಡಿ ಒಡೆಯುವುದಿಲ್ಲ ಹಾಗು ಕಾಲು ಮೃದುವಾಗುತ್ತದೆ.