ಮುಂಬೈ: ಆರ್.ಬಿ.ಐ. ಹಣಕಾಸು ನೀತಿ ಸಮಿತಿ ಸಭೆ ಜೂನ್ 8ರಂದು ನಡೆಯಲಿದ್ದು, ರೆಪೋ ದರವನ್ನು ಮತ್ತೆ ಏರಿಕೆ ಮಾಡುವ ಸಾಧ್ಯತೆ ಇದೆ.
ಕನಿಷ್ಠ 35 ಅಥವಾ 40 ಮೂಲಾಂಶದಷ್ಟು ರೆಪೋ ದರ ಏರಿಕೆ ಮಾಡುವ ಸಾಧ್ಯತೆ ಇದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ ಹಣಕಾಸು ನೀತಿ ಸಮಿತಿ ಸಭೆ ನಡೆಯಲಿದ್ದು, ರೆಪೋ ದರ ಏರಿಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಹಣದುಬ್ಬರ ನಿಯಂತ್ರಣ ಉದ್ದೇಶದಿಂದ ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಇತ್ತೀಚೆಗಷ್ಟೇ ಶೇ. 0.4 ರಷ್ಟು ರೆಪೋ ದರ ಏರಿಕೆ ಮಾಡಲಾಗಿದ್ದು, ಬ್ಯಾಂಕ್ ಗಳು ಸಾಲಗಳ ಇಂಎಂಐ ಹೆಚ್ಚಳ ಮಾಡಿದ್ದವು. ಮತ್ತೊಮ್ಮೆ ಇಎಂಐ ಹೆಚ್ಚಳವಾಗಿ ಸಾಲಗಾರರಿಗೆ ಹೊರೆ ಬೀಳಲಿದೆ ಎನ್ನಲಾಗಿದೆ.