alex Certify ʼಟ್ರೂ ಕಾಲರ್‌ʼ ಬಳಕೆದಾರರಿಗೆ ಇಲ್ಲಿದೆ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಟ್ರೂ ಕಾಲರ್‌ʼ ಬಳಕೆದಾರರಿಗೆ ಇಲ್ಲಿದೆ ಗುಡ್‌ ನ್ಯೂಸ್

ಆಂಡ್ರಾಯ್ಡ್ ಬಳಕೆದಾರರಿಗಾಗಿ ಹಲವಾರು ಹೊಸ ಫೀಚರ್ಸ್‌ ಅನ್ನು ಕಮ್ಯುನಿಕೇಷನ್ಸ್ ಪ್ಲಾಟ್‌ಫಾರ್ಮ್ ಟ್ರೂಕಾಲರ್ ಪ್ರಕಟಿಸಿದೆ. ಮುಂಬರುವ ವಾರಗಳಲ್ಲಿ ಈ ಫೀಚರ್ಸ್‌ ಗ್ರಾಹಕ ಬಳಕೆಗೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಹೊಸ ವೈಶಿಷ್ಟ್ಯಗಳಲ್ಲಿ VoIP ಕರೆಗಾಗಿ ಧ್ವನಿ ಕರೆ ಲಾಂಚರ್, ಎಸ್‌ಎಂಎಸ್‌ ಇನ್‌ಬಾಕ್ಸ್‌ಗೆ ಪಾಸ್‌ಕೋಡ್ ಲಾಕ್, ಕರೆ ಲಾಗ್‌ಗಳು, ಸರಳೀಕೃತ ಮತ್ತು ತ್ವರಿತ ಕರೆ, ವಿಡಿಯೊ ಕಾಲರ್ ಐಡಿಗಾಗಿ ಫೇಸ್ ಫಿಲ್ಟರ್‌ ಮತ್ತು ಎಐ ಸ್ಮಾರ್ಟ್ ಸಹಾಯಕ ಮುಂತಾದ ಎಲ್ಲ ವೈಶಿಷ್ಟ್ಯಗಳು ಬಳಕೆದಾರರಿಗೆ ಸುರಕ್ಷಿತ, ತೊಂದರೆ ಮುಕ್ತ ಮತ್ತು ಪರಿಣಾಮಕಾರಿ ಸಂವಹನಕ್ಕೆ ಅನುವು ಮಾಡಿಕೊಡಲಿದೆ.

ಟ್ರೂಕಾಲರ್‌ನ ಆಕರ್ಷಕ ಫೀಚರ್ಸ್‌ ನೋಟ:

ಧ್ವನಿ ಕರೆ ಲಾಂಚರ್: ಧ್ವನಿ ಕರೆಗೆ ಲಭ್ಯವಿರುವ ನಿಮ್ಮ ಎಲ್ಲ ಕಾಂಟ್ಯಾಕ್ಟ್‌ಗಳನ್ನು ಹುಡುಕಲು ಧ್ವನಿ ಕರೆ ಲಾಂಚರ್ ಸುಲಭ ಮಾಡಲಿದೆ. ಕೇವಲ ಒಂದು ಟಚ್ ಮೂಲಕ ಸಂಪರ್ಕ ಸಾಧಿಸಬಹುದು. ಉಚಿತ, ಹೈ ಡೆಫಿನಿಷನ್, ವಿಒಐಪಿ ಆಧಾರಿತ ಕರೆಯನ್ನು ಆನಂದಿಸಬಹುದು.

ಎಸ್‌ಎಂಎಸ್‌ ಪಾಸ್‌ಕೋಡ್ ಲಾಕ್: ಎಸ್‌ಎಂಎಸ್‌ ಗೌಪ್ಯತೆ ಖಚಿತಪಡಿಸಲು ಬಯಸಿದರೆ, ಈ ವೈಯಕ್ತಿಕ ಡೇಟಾಗೆ ಹೆಚ್ಚುವರಿ ಭದ್ರತೆಯ ಲೇಯರ್ ಸೇರಿಸಲು ಪಾಸ್‌ಕೋಡ್ ಲಾಕ್ ಅನ್ನು ಬಳಸಲು ಸಾಧ್ಯವಾಗುತ್ತದೆ.

ಸುಧಾರಿತ ಕರೆ : ಕರೆಯ ಸಮಯದಲ್ಲಿಯೇ ಕರೆ ಕಾರಣ ಸೇರಿಸಲು ಸಾಧ್ಯವಿದೆ. ಕರೆಯನ್ನು ಸ್ವೀಕೃತಿದಾರರು ಸ್ವೀಕರಿಸದಿದ್ದರೆ ಮತ್ತು ಇನ್ನೂ ಫೋನ್ ರಿಂಗ್ ಆಗುತ್ತಿದ್ದರೆ, ಅಂತಹ ಸಂದರ್ಭದಲ್ಲಿ ತ್ವರಿತ ಕರೆ ಮಾಡಿದ ಕಾರಣವನ್ನು ಸೇರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.

ವಿಡಿಯೊ ಕಾಲರ್ ಐಡಿಗಾಗಿ ಫೇಸ್ ಫಿಲ್ಟರ್‌: ಟ್ರೂಕಾಲರ್ ಟೆಂಪ್ಲೇಟ್‌ಗಳನ್ನು ಸೇರಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...