ಧಾರ್ಮಿಕ ಗ್ರಂಥಗಳ ಪ್ರಕಾರ ಮಾನವನ ದೇಹ ಐದು ( ಗಾಳಿ, ಬೆಂಕಿ, ಭೂಮಿ, ನೀರು, ಆಕಾಶ) ಅಂಶಗಳಿಂದ ಕೂಡಿರುತ್ತದೆ. ಇವೆಲ್ಲದರಲ್ಲಿ ನೀರಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಜಲವಿಲ್ಲದೆ ಜೀವವಿಲ್ಲ. ಹಾಗಾಗಿಯೇ ಪೂಜೆಗಳಿಗೆ ನೀರನ್ನು ಬಳಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ವರುಣ ದೇವ ನೀರಿನ ಅಧಿಪತಿ. ಶ್ರೀಗಣೇಶನನ್ನು ಕೂಡ ನೀರಿನ ದೇವತೆ ಎಂದು ಕರೆಯಲಾಗುತ್ತದೆ. ಅನೇಕ ದೋಷಗಳನ್ನು ಪರಿಹರಿಸಿ ಶುಭ ಫಲ ನೀಡುವ ಶಕ್ತಿ ನೀರಿಗಿದೆ.
ಶನಿದೋಷ ನಿವಾರಣೆಗೆ ತಾಮ್ರದ ಲೋಟದಲ್ಲಿ ನೀರು ತೆಗೆದುಕೊಂಡು ಅದಕ್ಕೆ ಸಾಸಿವೆ ಎಣ್ಣೆ ಹಾಗೂ ನೀಲಿ ಹೂವನ್ನು ಹಾಕಿ. ಈ ನೀರನ್ನು ಅಶ್ವತ್ಥ ಮರಕ್ಕೆ ಅರ್ಪಿಸಿ. ಇದ್ರಿಂದ ಶನಿದೋಷ ನಿವಾರಣೆಯಾಗಿ ಎಲ್ಲ ರೀತಿಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಸ್ನಾನಕ್ಕಿಂತ ಮೊದಲು ಈ ಮಂತ್ರವನ್ನು ಪಠಿಸಿ. ‘ಓಂ, ಹ್ರೂಂ ವರುಣ ದೇವಾಯ ನಮಃ’ ಎಂಬ ಮಂತ್ರ ಪಠಿಸಿದ ನಂತ್ರ ಸ್ನಾನ ಮಾಡುವುದ್ರಿಂದ ಆರೋಗ್ಯ ವೃದ್ಧಿಯಾಗಿ ಆನಂದ ನಿಮ್ಮದಾಗುತ್ತದೆ.
ಶಿವಲಿಂಗಕ್ಕೆ ಅರ್ಪಿಸಿದ ಜಲವನ್ನು ನಿಮ್ಮ ದೇಹಕ್ಕೆ ಚಿಮುಕಿಸಿಕೊಳ್ಳುವುದ್ರಿಂದ ರಾಹು-ಕೇತು ದೋಷ ನಿವಾರಣೆಯಾಗುತ್ತದೆ.
ಪ್ರತಿದಿನ ಬೆಳಿಗ್ಗೆ ಭಗವಂತ ಸೂರ್ಯನಿಗೆ ನೀರನ್ನು ಅರ್ಪಿಸುವುದ್ರಿಂದ ಆತ್ಮವಿಶ್ವಾಸ ಹೆಚ್ಚಾಗುವ ಜೊತೆಗೆ ಯಶಸ್ಸು ನಿಮ್ಮದಾಗುತ್ತದೆ.