ಮಗುವಿಗೆ ಜನ್ಮ ನೀಡುವುದು ಅಂದ್ರೆ ಅದು ತಾಯಿಗೆ ಪುನರ್ಜನ್ಮವಿದ್ದಂತೆ. ಹೆರಿಗೆ ಸಮಯದಲ್ಲಿ ಹಲವಾರು ಮಂದಿ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದೀಗ ಮಹಿಳೆಯೊಬ್ಬಳು ಒಂದೇ ಮಗುವನ್ನು ಎರಡು ಬಾರಿ ಹೆತ್ತಿರೋ ಬಗ್ಗೆ ತನ್ನ ಕಥೆಯನ್ನು ಹೇಳಿಕೊಂಡಿದ್ದಾಳೆ.
ಜೈಡೆನ್ ಆಶ್ಲಿಯಾ ಎಂಬ ಮಹಿಳೆ ಟಿಕ್‌ಟಾಕ್ ನಲ್ಲಿ ತನ್ನ ಕಥೆಯನ್ನು ಹಂಚಿಕೊಂಡಿದ್ದಾಳೆ. ವೈದ್ಯರು ತನ್ನ ಗಂಡು ಮಗುವನ್ನು ಹೊರತೆಗೆದು ಮತ್ತೆ ತನ್ನ ಒಡಲಲ್ಲಿ ಇಟ್ಟ ನಂತರ ಹೇಗೆ ಎರಡು ಬಾರಿ ಜನ್ಮ ನೀಡಿದೆ ಎಂಬುದಾಗಿ ಹಂಚಿಕೊಂಡಿದ್ದಾರೆ.
ಟಿಕ್‌ಟಾಕ್‌ನಲ್ಲಿ ತನ್ನ ಮಗುವಿಗೆ ಹುಟ್ಟುವ ಮೊದಲೇ ಅನಾರೋಗ್ಯವಿತ್ತು ಎಂಬುದಾಗಿ ಹೇಳಿಕೊಂಡಿದ್ದಾಳೆ. ಪುತ್ರ ಸ್ಪೈನಾ ಬೈಫಿಡಾ ಎಂಬ ರೋಗದಿಂದ ಬಳಲುತ್ತಿದ್ದ. ಅಲ್ಲದೆ ಮಗು ಬದುಕುಳಿಯುವ ಬಗ್ಗೆ ಯಾವುದೇ ಭರವಸೆಯಿರಲಿಲ್ಲ. ಅದೃಷ್ಟವಶಾತ್, ಒರ್ಲ್ಯಾಂಡೊ ಮೂಲದ ಆಸ್ಪತ್ರೆ ತನ್ನ ಮಗನನ್ನು ಬದುಕಿಸಿದೆ. ಆ ಆಸ್ಪತ್ರೆ ತೆರೆದ ಭ್ರೂಣದ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಹೊಂದಿತ್ತು. ಇದರರ್ಥ ಶಿಶುಗಳು ಹುಟ್ಟುವ ಮೊದಲೇ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದು.
ಗರ್ಭದಲ್ಲಿದ್ದ ಮಗುವನ್ನು ಹೊರತೆಗೆದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ನಂತರ, ಮಗುವನ್ನು ಮತ್ತೆ ತನ್ನ ತಾಯಿಯ ಗರ್ಭದಲ್ಲಿ ಸೇರಿಸಿದ್ದಾರೆ. ಹೀಗಾಗಿ ಮಹಿಳೆ ಒಂದೇ ಮಗುವಿಗೆ ಎರಡು ಬಾರಿ ಜನ್ಮ ನೀಡಿದ್ದಾಳೆ.
ಮಿಸೌರಿ ಮೂಲದ ಜೊನಿ ರೇನ್‌ಕೆಮೆಯರ್ ಮತ್ತು ಆಕೆಯ ಗೆಳೆಯ ಕ್ರಿಸ್ ಸ್ಕೈನ್ ಅವರಿಗೆ 19 ವಾರಗಳ ಗರ್ಭಾವಸ್ಥೆಯಲ್ಲಿ ಅವರ ಗಂಡು ಮಗು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದೆ ಎಂದು ತಿಳಿಸಲಾಯಿತು. ಈ ವೇಳೆ ವೈದ್ಯರು ಮಗುವನ್ನು ಹೊರತೆಗೆದು ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ಸೂಚಿಸಿದ್ದರು.