alex Certify ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಡಿಎ, ಟಿಎ, ಮನೆ ಬಾಡಿಗೆ ಭತ್ಯೆ ಹೆಚ್ಚಳ ಘೋಷಣೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಡಿಎ, ಟಿಎ, ಮನೆ ಬಾಡಿಗೆ ಭತ್ಯೆ ಹೆಚ್ಚಳ ಘೋಷಣೆ ಸಾಧ್ಯತೆ

ನವದೆಹಲಿ: ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ. ವರದಿಗಳ ಪ್ರಕಾರ ಕೇಂದ್ರ ಸರ್ಕಾರ ಈ ವರ್ಷದ ಜುಲೈ ಅಥವಾ ಆಗಸ್ಟ್‌ ನಲ್ಲಿ ತುಟ್ಟಿಭತ್ಯೆ(ಡಿಎ) ಹೆಚ್ಚಳವನ್ನು ಘೋಷಿಸಬಹುದು. ಮನೆ ಬಾಡಿಗೆ ಭತ್ಯೆ (ಹೆಚ್.ಆರ್‌.ಎ.) ಮತ್ತು ಪ್ರಯಾಣ ಭತ್ಯೆ(ಟಿಎ) ಕೂಡ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.

ಚಿಲ್ಲರೆ ಹಣದುಬ್ಬರದ ದತ್ತಾಂಶದ ಆಧಾರದ ಮೇಲೆ ಸರ್ಕಾರವು ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜುಲೈನಲ್ಲಿ ಡಿಎ ಮತ್ತು ತುಟ್ಟಿಭತ್ಯೆ(ಡಿಆರ್) ಪರಿಷ್ಕರಿಸುತ್ತದೆ. ಡಿಎಯನ್ನು ನಾಲ್ಕು ಪ್ರತಿಶತದಷ್ಟು ಹೆಚ್ಚಿಸುವ ಸಾಧ್ಯತೆಯಿದೆ, ಇದು ಸಂಬಳದ ಒಟ್ಟು ಶೇಕಡ 38 ಕ್ಕೆ ಬರುತ್ತದೆ.

ಹಣದುಬ್ಬರದ ಪರಿಣಾಮವನ್ನು ತಡೆಯಲು ಸರ್ಕಾರಿ ನೌಕರರಿಗೆ ಅವರ ಸಂಬಳದ ಸ್ಥಿರ ಅಂಶವಾಗಿ ತುಟ್ಟಿಭತ್ಯೆಯನ್ನು ನೀಡಲಾಗುತ್ತದೆ. ಬೆಲೆ ಏರಿಕೆಯ ಪರಿಣಾಮವನ್ನು ತಗ್ಗಿಸಲು ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ.

ದೇಶದಲ್ಲಿ ಚಿಲ್ಲರೆ ಹಣದುಬ್ಬರವು ಏಪ್ರಿಲ್‌ ನಲ್ಲಿ ಶೇ. 7.79 ಕ್ಕೆ ಏರಿದೆ, ಇದು 2014 ರಿಂದ ಅತ್ಯಧಿಕವಾಗಿದೆ. ಇದು ಅಂಕಿಅಂಶಗಳು ಏರಿರುವ 7 ನೇ ಸತತ ತಿಂಗಳನ್ನು ಸೂಚಿಸುತ್ತದೆ. ಆಹಾರ ಪದಾರ್ಥಗಳು ಮತ್ತು ಇತರ ಮೂಲಭೂತ ಅವಶ್ಯಕತೆಗಳ ಹೆಚ್ಚುತ್ತಿರುವ ವೆಚ್ಚದಿಂದಾಗಿ, ಮುಂಬರುವ ತಿಂಗಳುಗಳಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತೊಂದು ಡಿಎ ಹೆಚ್ಚಳದ ಭರವಸೆಯಲ್ಲಿದ್ದಾರೆ.

7 ನೇ ವೇತನ ಆಯೋಗದ ಅಡಿಯಲ್ಲಿ, ಕೇಂದ್ರ ಕ್ಯಾಬಿನೆಟ್ ಮಾರ್ಚ್ 2022 ರಲ್ಲಿ DA ನಲ್ಲಿ ಶೇ. 3 ರಷ್ಟು ಹೆಚ್ಚಳ ಅನುಮೋದಿಸಿತು. ಅದಕ್ಕೂ ಮೊದಲು, ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮೂರು ಕಂತುಗಳನ್ನು ಫ್ರೀಜ್ ಮಾಡಿದ ನಂತರ ಸರ್ಕಾರವು ಜುಲೈ ಮತ್ತು ಅಕ್ಟೋಬರ್ 2021 ರಲ್ಲಿ ಕೊನೆಯದಾಗಿ ತುಟ್ಟಿ ಭತ್ಯೆಯನ್ನು ಹೆಚ್ಚಿಸಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...