ವಿವಾಹ ನಿಶ್ಚಿತಾರ್ಥವಾಗಿದ್ದ ಯುವತಿಯೊಬ್ಬರು ಹಾವು ಕಚ್ಚಿ ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಬಳಿ ನಡೆದಿದೆ.
ಶಿರಾಳಕೊಪ್ಪ ಸಮೀಪದ ನಾಗೀಹಳ್ಳಿ ಗ್ರಾಮದ 18 ವರ್ಷದ ಯುವತಿ ಸ್ನೇಹಾ ಸಾವನ್ನಪ್ಪಿದವರಾಗಿದ್ದಾರೆ. ಈಕೆ ಶನಿವಾರದಂದು ಮೆಕ್ಕೆ ಜೋಳದ ಹೊಲದಲ್ಲಿ ಕೊಯ್ಲು ಮಾಡುತ್ತಿದ್ದಾಗ ಹಾವು ಕಚ್ಚಿದೆ ಎನ್ನಲಾಗಿದೆ.
ಹಾವು ಕಚ್ಚಿದ ಸ್ನೇಹಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇವರ ವಿವಾಹ ಹಾನಗಲ್ ತಾಲೂಕಿನ ಯುವಕನೊಂದಿಗೆ ನಿಶ್ಚಯವಾಗಿತ್ತು ಎನ್ನಲಾಗಿದೆ.