alex Certify ಬಾಯಾರಿದ ಕರಿನಾಗರಹಾವಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾರೆ ಈ ವ್ಯಕ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಾರಿದ ಕರಿನಾಗರಹಾವಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾರೆ ಈ ವ್ಯಕ್ತಿ..!

ಕಾಡಿನ ನಾಗರಹಾವು ಅಥವಾ ಸಾಮಾನ್ಯವಾಗಿ ಕಪ್ಪು(ಕರಿ)ನಾಗರಹಾವು ಎಂದು ಕರೆಯಲ್ಪಡುವ ಈ ಉರಗ ವಿಷಕಾರಿ ಸರ್ಪ ಎಂಬುದು ನಿಮಗೆ ತಿಳಿದೇ ಇದೆ. ಇದು ಆಫ್ರಿಕಾಕ್ಕೆ ಸ್ಥಳೀಯವಾಗಿರುವ ವಿಷಕಾರಿ ಹಾವಿನ ಜಾತಿಯಾಗಿದೆ. ಆದರೆ, ಈ ಬೇಸಿಗೆ ಕಾಲದಲ್ಲಿ ಎಲ್ಲಾ ಪ್ರಾಣಿ-ಪಕ್ಷಿಗಳಂತೆ ಈ ಉರಗಗಳು ಕೂಡ ನಿರ್ಜಲೀಕರಣ ಸಮಸ್ಯೆಯನ್ನು ಎದುರಿಸುತ್ತದೆ.

ಇದೀಗ, ಕಪ್ಪು ನಾಗರಹಾವಿಗೆ ವ್ಯಕ್ತಿಯೊಬ್ಬರು ಒಂದು ಲೋಟದಲ್ಲಿ ನೀರು ಕುಡಿಯಲು ಸಹಾಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹುಲ್ಲಿನ ಮೇಲೆ ಕುಳಿತಿರುವಾಗ ವ್ಯಕ್ತಿಯು ನಿರ್ಭಯವಾಗಿ ನೀರಿನ ಲೋಟವನ್ನು ಹಿಡಿದಿದ್ದಾರೆ. ಬಾಯಾರಿಕೆಯಿಂದ ಬಳಲುತ್ತಿದ್ದ ಕರಿ ನಾಗರಹಾವು ಗಾಜಿನೊಳಗೆ ತನ್ನ ಬಾಯಿಯನ್ನು ಹಾಕಿ ನೀರನ್ನು ಹೀರಿದೆ.

ಐಎಫ್‌ಎಸ್ ಅಧಿಕಾರಿ ಸುಸಂತಾ ನಂದಾ ಅವರು ಹಂಚಿಕೊಂಡ ಟ್ವೀಟ್ ಗೆ, ಈ ವಿಡಿಯೋವನ್ನು ಬಳಕೆದಾರರು ಹಂಚಿಕೊಂಡಿದ್ದಾರೆ. ಐಎಫ್ಎಸ್ ಅಧಿಕಾರಿ ಹಂಚಿಕೊಂಡ ವಿಡಿಯೋದಲ್ಲಿ, ಕೆಲವು ಆರಾಧ್ಯ ಬಾತುಕೋಳಿಗಳು ಮತ್ತು ಮರಿ ಕೋತಿ ಒಟ್ಟಿಗೆ ಕಲ್ಲಂಗಡಿ ತಿನ್ನುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಎರಡೂ ವಿಡಿಯೋಗಳು ಸಹ ನೋಡಲು ಆಕರ್ಷಕವಾಗಿವೆ.

ಬಾತುಕೋಳಿಗಳು ಕೋತಿಯೊಂದಿಗೆ ಕಲ್ಲಂಗಡಿ ಹಂಚಿ ತಿನ್ನುತ್ತಿರುವ ವಿಡಿಯೋ 23,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದರೆ, ಕರಿನಾಗರಹಾವು ನೀರು ಕುಡಿಯುವ ವಿಡಿಯೋ ಸಾವಿರಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.

— Susanta Nanda (@susantananda3) August 22, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...