ತ್ರಿಶೂರ್: ಕೇರಳದ ತ್ರಿಶೂರ್ ಪ್ರದೇಶವು ಸಾಂಸ್ಕೃತಿಕ, ಧಾರ್ಮಿಕ ಸಾಮರಸ್ಯದ ಸಂಕೇತವಾಗಿದೆ. ಪೂರಂ ದಿನದಂದು ಕ್ರಿಶ್ಚಿಯನ್ ಪಾದ್ರಿ ಡೇವಿಸ್ ಚಿರಮ್ಮೆಲ್ ಅವರು ಕೇವಲ 2 ರೂ.ಗೆ ಇಡ್ಲಿ, ಸಾಂಬಾರ್ ವಿತರಿಸಿದ್ದಾರೆ.
ತ್ರಿಶೂರ್ ಪಟ್ಟಣದಲ್ಲಿರುವ ಸ್ವರಾಜ್ ರೌಂಡ್ನಲ್ಲಿ ಗುಣಮಟ್ಟದ ಆಹಾರವನ್ನು ನೀಡುವ ಹಲವಾರು ಹೋಟೆಲ್ಗಳಿದ್ದರೂ ಸಹ, ಪೂರಂ ದಿನದಂದು ಪಟ್ಟಣಕ್ಕೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಪೂರಂ ದಿನದಂದು, ನಿಲ್ಲಲು ಸಹ ಸಾಕಷ್ಟು ಸ್ಥಳಾವಕಾಶವಿಲ್ಲದ ಕಾರಣ ಜನರು ಆಹಾರಕ್ಕಾಗಿ ಒಂದು ಹೋಟೆಲ್ನಿಂದ ಇನ್ನೊಂದು ಹೋಟೆಲ್ಗೆ ಓಡುತ್ತಾರೆ.
ದಟ್ಟಣೆಯ ಸ್ಥಳ ಮತ್ತು ಕಾರ್ಯನಿರತ ಸಿಬ್ಬಂದಿಯಿಂದ, ಅನೇಕರು ತಮ್ಮ ಉಪಹಾರ ಮತ್ತು ಊಟವನ್ನು ವಿಳಂಬಗೊಳಿಸುತ್ತಾರೆ. ಈ ಕಾರಣಕ್ಕಾಗಿಯೇ ನಾವು ಸಾರ್ವಜನಿಕರಿಗೆ ಇಡ್ಲಿ ಮತ್ತು ಸಾಂಬಾರ್ ವಿತರಿಸಲು ನಿರ್ಧರಿಸಿದ್ದಾಗಿ ಫಾದರ್ ಚಿರಮ್ಮೆಲ್ ಹೇಳಿದ್ದಾರೆ. ಅವರ ಈ ರೀತಿಯ ಕಾರ್ಯಕ್ಕೆ ಹಲವರು ಕೃತಜ್ಞತೆ ಸಲ್ಲಿಸಿದ್ದಾರೆ.
ಇಡ್ಲಿ ಮತ್ತು ಸಾಂಬಾರ್ ಅನ್ನು ಕೇವಲ 2 ರೂ.ಗೆ ವಿತರಿಸಲಾಯಿತು. ಫಾದರ್ ನೇತೃತ್ವದ ತಂಡದಿಂದ ಸುಮಾರು 30,000 ಇಡ್ಲಿಗಳು ಮತ್ತು ಸಾಂಬಾರ್ ಅನ್ನು ತಯಾರಿಸಿ ಸ್ವರಾಜ್ ರೌಂಡ್ನಲ್ಲಿ ವಿತರಿಸಲಾಯಿತು. ಪೂರಂ ಸಮಯದಲ್ಲಿ, ಅನೇಕ ಸಂಸ್ಥೆಗಳು ಕುಡಿಯುವ ನೀರು, ಮಜ್ಜಿಗೆ ಇತ್ಯಾದಿಗಳನ್ನು ವಿತರಿಸುತ್ತವೆ. ಆದರೆ, ಇದೇ ಮೊದಲ ಬಾರಿಗೆ ಇಡ್ಲಿ ಮತ್ತು ಸಾಂಬಾರ್ ವಿತರಿಸಲಾಯಿತು.