alex Certify ನಾಲ್ಕು ಕೆಜಿ ತೂಕವಿದೆ ಈ ವಿಶಿಷ್ಟ ಮಾವು, ಬೆಲೆ ಕೇಳಿದ್ರೆ ದಂಗಾಗಿ ಹೋಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕು ಕೆಜಿ ತೂಕವಿದೆ ಈ ವಿಶಿಷ್ಟ ಮಾವು, ಬೆಲೆ ಕೇಳಿದ್ರೆ ದಂಗಾಗಿ ಹೋಗ್ತೀರಾ..!

ಈಗ ಮಾವಿನ ಹಣ್ಣಿನ ಸೀಸನ್‌. ಎಲ್ಲಾ ಕಡೆ ಹಣ್ಣುಗಳ ರಾಜನ ದರ್ಬಾರ್‌ ಶುರುವಾಗ್ತಿದೆ. ನೀವು ಮಾರುಕಟ್ಟೆಯಲ್ಲಿ ಬಗೆಬಗೆಯ ಮಾವುಗಳನ್ನು ನೋಡಿರ್ತೀರಾ. ಇವೆಲ್ಲದಕ್ಕಿಂತ ಭಿನ್ನವಾಗಿದೆ ಗಂಡು ಮಾವು ಎಂದೇ ಕರೆಯಲ್ಪಡುವ ನೂರ್‌ ಜಹಾನ್‌ ತಳಿಯ ಈ ಮ್ಯಾಂಗೋ.

ಈ ಬಾರಿಯಂತೂ ನೂರ್‌ಜಹಾನ್‌ ತಳಿಗೆ ಸೇರಿದ ಒಂದು ಮಾವಿನ ಹಣ್ಣು ಬರೋಬ್ಬರಿ 4 ಕೆಜಿಗಿಂತಲೂ ಜಾಸ್ತಿ ಇದೆ. ಬೆಲೆ ಕೇಳಿದ್ರೆ ನೀವು ಹೌಹಾರಿ ಬಿಡ್ತೀರಾ. ಇದು ಅಫ್ಘಾನ್ ಮೂಲದ ತಳಿಯೆಂದು ಹೇಳಲಾಗುತ್ತದೆ.

ನೂರ್ ಜಹಾನ್ ಮಾವಿನ ಜಾತಿಯ ಕೆಲವು ಮಾವಿನ ಮರಗಳು ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಕತ್ತಿವಾಡ ಪ್ರದೇಶದಲ್ಲಿವೆ. ಈ ಪ್ರದೇಶವು ಗುಜರಾತ್‌ಗೆ ಹೊಂದಿಕೊಂಡಿದೆ. ಇಂದೋರ್‌ನಿಂದ 250 ಕಿ.ಮೀ ದೂರದಲ್ಲಿರುವ ಕತ್ತಿವಾಡದ ಮಾವು ಬೆಳೆಗಾರ ಶಿವರಾಜ್ ಸಿಂಗ್ ಜಾಧವ್ ತೋಟದಲ್ಲಿ ನೂರ್‌ ಜಹಾನ್‌ ಮಾವಿನ ಹಣ್ಣುಗಳು ನಳನಳಿಸುತ್ತಿವೆ.

ಇವರ ತೋಟದಲ್ಲಿ 3 ನೂರ್‌ಜಹಾನ್ ಮಾವಿನ ಮರಗಳಿದ್ದು, 250 ಕಾಯಿಗಳಿವೆ. ಜೂನ್ 15 ರೊಳಗೆ ಇವು ಬೆಳೆದು ಹಣ್ಣಾಗಲಿದ್ದು, ಒಂದು ಹಣ್ಣಿನ ಗರಿಷ್ಠ ತೂಕ ನಾಲ್ಕು ಕೆಜಿಗಿಂತಲೂ ಹೆಚ್ಚಾಗಲಿದೆ. ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಹೂವುಗಳೇ ಉದುರಿ ಹೋಗಿವೆ. ಕಳೆದ ವರ್ಷ ನೂರ್ ಜಹಾನ್ ತಳಿಯ ಒಂದು ಮಾವಿನ ಹಣ್ಣಿನ ಸರಾಸರಿ ತೂಕ 3.80 ಕೆಜಿ ಇತ್ತು.

ಈಗಾಗ್ಲೇ ಅನೇಕರು ಈ ಮಾವಿನ ಹಣ್ಣಿಗಾಗಿ ಮುಂಗಡ ಬುಕ್ಕಿಂಗ್‌ಗಾಗಿ ಕರೆ ಮಾಡ್ತಿದ್ದಾರಂತೆ. ಆದ್ರೆ ಭಾರೀ ಮಳೆಯ ಅಪಾಯವಿರುವುರದಿಂದ ಬೆಳೆಗಾರ ಮುಂಗಡ ಬುಕ್ಕಿಂಗ್‌ ತೆಗೆದುಕೊಳ್ತಿಲ್ಲ. ಈ ತಳಿಯ ಒಂದೊಂದು ಮಾವಿನ ಹಣ್ಣಿನ ಬೆಲೆ 1000-2000 ರೂಪಾಯಿ. ಕಳೆದ ಬಾರಿ ಇದು 500-1500 ರೂಪಾಯಿಗೆ ಮಾರಾಟವಾಗಿತ್ತು.

ನೂರ್‌ಜಹಾನ್ ಮಾವಿನ ಮರಗಳಲ್ಲಿ ಸಾಮಾನ್ಯವಾಗಿ ಜನವರಿ-ಫೆಬ್ರವರಿಯಿಂದ ಹೂ ಬಿಡಲು ಪ್ರಾರಂಭಿಸುತ್ತದೆ. ಅದರ ಹಣ್ಣುಗಳು ಜೂನ್‌ 15ರ ವೇಳೆಗೆ ಚೆನ್ನಾಗಿ ಮಾಗಿ ಮಾರಾಟಕ್ಕೆ ಸಿದ್ಧವಾಗುತ್ತವೆ. ಈ ಹಣ್ಣುಗಳ ಉದ್ದ ಸುಮಾರು 1 ಅಡಿ ಇರುತ್ತದೆ. ಮಾವಿನ ಒರಟೆಯೇ 150-200 ಗ್ರಾಂ ತೂಕವಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...