alex Certify ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗಬಹುದು ‘ಡೈಪರ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗಬಹುದು ‘ಡೈಪರ್’

ಕೆಲ ವರ್ಷಗಳ ಹಿಂದೆ ಮಕ್ಕಳಿಗೆ ಮನೆಯಲ್ಲಿ ಮಾಡಿದ ಹತ್ತಿ ಬಟ್ಟೆಯ ಪ್ಯಾಡ್ ಹಾಕ್ತಿದ್ದರು. ಅದನ್ನು ಆಗಾಗ ಬದಲಾಯಿಸಬೇಕಾಗಿತ್ತು. ಈಗ ಮಾರುಕಟ್ಟೆಗೆ ತರ ತರಹದ ಡೈಪರ್ ಲಗ್ಗೆ ಇಟ್ಟಿದೆ. ಇದು ಪಾಲಕರಿಗೆ ನೆಮ್ಮದಿ ನೀಡ್ತಾ ಇದೆ ನಿಜ. ಆದ್ರೆ ಮಕ್ಕಳು ಇದರಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಆಗಾಗ ಬಟ್ಟೆ ಬದಲಿಸುವುದು ಪಾಲಕರಿಗೆ ಹಿಂಸೆ. ಸಮಯ ಕೂಡ ಇರುವುದಿಲ್ಲ. ಹಾಗಾಗಿ ಬಹಳ ಸಮಯ ಒಂದೆ ಡೈಪರ್ ಬಳಸುತ್ತಾರೆ. ಇದರಿಂದ ಮಕ್ಕಳಿಗೆ ಯೂರಿನ್ ಇನ್ ಫೆಕ್ಷನ್ ಆಗುವ ಸಾಧ್ಯತೆ ಇದೆ. ನವಜಾತ ಶಿಶುಗಳು ಇದರಿಂದ ಬಹಳಷ್ಟು ಕಿರಿಕಿರಿ ಅನುಭವಿಸುತ್ತಾರೆ.

ವಯಸ್ಕರ ಚರ್ಮಕ್ಕಿಂತ ಮಕ್ಕಳ ಚರ್ಮ ಸಾಕಷ್ಟು ಸೂಕ್ಷ್ಮವಾಗಿರುತ್ತದೆ. ಡೈಪರ್ ಬಳಕೆಯಿಂದ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಡೈಪರ್ ಗೆ ರಾಸಾಯನಿಕ ವಸ್ತುಗಳನ್ನು ಬಳಸಿರುತ್ತಾರೆ. ತೇವವನ್ನು ಹೀರಿಕೊಳ್ಳಲು ಪ್ಲಾಸ್ಟಿಕ್ ಕೂಡ ಬಳಸಿರುತ್ತಾರೆ. ಇದರಿಂದಾಗಿ ಗಾಳಿ ಆಡುವುದಿಲ್ಲ. ಹಾಗಾಗಿ ಬಹಳ ಬೇಗ ಇನ್ ಫೆಕ್ಷನ್ ಆಗುತ್ತೆ.

ಅನೇಕ ಸಂದರ್ಭಗಳಲ್ಲಿ ಡೈಪರ್ ಬಳಸುವುದು ಅನಿವಾರ್ಯವಾಗುತ್ತದೆ. ಆಗ ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರು ಗಮನ ನೀಡಬೇಕಾಗುತ್ತದೆ.

ಮರೆತೂ ನವಜಾತ ಶಿಶುಗಳಿಗೆ ಡೈಪರ್ ಹಾಕಬೇಡಿ. ಅವರಿಗೆ ಸೋಂಕು ಅತಿ ಬೇಗ ತಗಲುತ್ತದೆ.

ಒಂದೇ ಡೈಪರನ್ನು ಬಹಳ ಸಮಯ ಹಾಕಬೇಡಿ. 3-4 ಗಂಟೆಗೊಮ್ಮೆ ಬದಲಾಯಿಸಿ.

ಡೈಪರ್ ತೆಗೆದ ನಂತರ ಚರ್ಮವನ್ನು ಸ್ವಚ್ಛಗೊಳಿಸಿ. ಡೈಪರ್ ಕ್ರೀಂ ಬಳಸಿ. ಒಣ ಬಟ್ಟೆಯಲ್ಲಿ ಕ್ಲೀನ್ ಮಾಡಿ ಮತ್ತೊಂದು ಬಟ್ಟೆ ಹಾಕಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...