ಯಾವಾಗಲೂ ನೀರು ಬಳಸುವುದರಿಂದ ಅಲ್ಲಲ್ಲಿ ಕಲೆಯಾಗಿ ನೋಡಲು ಅಸಹ್ಯವೆನಿಸುತ್ತದೆ. ಆದ್ದರಿಂದ ವಾರಕ್ಕೊಮ್ಮೆ ನಿಂಬೆರಸವನ್ನು ಸುತ್ತಲು ಟ್ಯಾಪ್ ಸುತ್ತಾ ಸ್ಪ್ರೇ ಮಾಡಿ 5 ನಿಮಿಷ ನೆನೆಯಲು ಬಿಟ್ಟು ನಂತರ ಬ್ರಷ್ನಿಂದ ಚೆನ್ನಾಗಿ ಉಜ್ಜಿ ತೊಳೆದರೆ ಎಲ್ಲಾ ಕಲೆಗಳು ಮಾಯಾವಾಗುತ್ತದೆ.
ಸ್ಪಾಟ್ ಕ್ಲೀನಿಂಗ್
ಟ್ಯಾಪನ್ನು ಉಪಯೋಗಿಸಿದ ನಂತರ ಒಂದು ಕಾಟನ್ ಕ್ಲಾಥ್ ತೆಗೆದುಕೊಂಡು ನೀರು ನಿಲ್ಲದಂತೆ ನೋಡಿಕೊಂಡು ತಕ್ಷಣ ಒರೆಸಿ. ಇದರಿಂದ ಕಲೆ ಆಗುವ ಸಾಧ್ಯತೆಯೂ ಕಡಿಮೆ. ಬಳಸಿದಾಗಲೆಲ್ಲಾ ಮನೆಯವರು ಹೀಗೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ ಹೊಸದಾಗಿ ಕಾಣುತ್ತದೆ. ಶೈನಿಂಗ್ ಹಾಗೆಯೇ ಉಳಿದಿರುತ್ತದೆ.
ವಿನೇಗರ್ ಬೆಸ್ಟ್
ನೀರಿನ ಟ್ಯಾಪ್ನ ಮೂಲೆ, ಸುತ್ತಮುತ್ತ ಶುಚಿಗೊಳಿಸಲು ವಿನೇಗರ್ ಬೆಸ್ಟ್. ವಿನೇಗರ್ ಹನಿಯನ್ನು ಟ್ಯಾಪಿನ ಸುತ್ತ ಹಾಕಿ. ಉಪಯೋಗಿಸಿ ಬಿಟ್ಟ ಟೂತ್ಬ್ರಷ್ನಿಂದ ಮೂಲೆ ಮೂಲೆ ಬಿಡದಂತೆ ಉಜ್ಜಿದರೆ ಮತ್ತಷ್ಟು ಶುಚಿಗೊಳ್ಳುತ್ತದೆ. ಎಲ್ಲ ಬ್ರಷ್ಗಳಿಗಿಂತ ಟೂತ್ಬ್ರಷ್ ಬಳಸಿದರೆ ಬೆಸ್ಟ್. ಸೋಪಿನ ಪೌಡರ್ ಉಪಯೋಗಿಸಿಯೂ ಶುಚಿಗೊಳಿಸಬಹುದು.