ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ನಾಡು ಪ್ರದೇಶದಲ್ಲಿ ಆಡಳಿತಾರೂಢ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಬ್ಯಾನರ್ಗಳನ್ನು ಹಾನಿಗೊಳಿಸಿದ್ದಕ್ಕಾಗಿ 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳನ್ನು ಪೊಲೀಸರು ಠಾಣೆಯಲ್ಲಿ ಕೂರಿಸಿದ್ದಾರೆ.
ಆಡಳಿತಾರೂಢ ವೈ ಎಸ್ ಆರ್ ಸದಸ್ಯರಿಂದ ಬಂದ ದೂರಿನ ಆಧಾರದ ಮೇಲೆ, ಪೊಲೀಸರು ಜನಪದವು ಗ್ರಾಮದ 10 ರಿಂದ 15 ವರ್ಷದೊಳಗಿನ ಕೆಲವು ಮಕ್ಕಳನ್ನು ಬ್ಯಾನರ್ ಹರಿದಿದ್ದಾರೆ ಎಂಬ ಕಾರಣಕ್ಕೆ ಪಿಡುಗುರಾಳದ ಪೊಲೀಸರು ಮಕ್ಕಳನ್ನು ಒಂದು ದಿನ ಠಾಣೆಯಲ್ಲಿಟ್ಟು ನಂತರ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
ನಾವು ವಿದ್ಯಾರ್ಥಿಗಳನ್ನು ವಿಚಾರಣೆಗಾಗಿ ಅವರ ಪೋಷಕರೊಂದಿಗೆ ಠಾಣೆಗೆ ಕರೆದಿದ್ದೇವೆ. ಅವರು ವೈ ಎಸ್ ಆರ್ ಸಿ ಪಿ ಸ್ಥಾಪಿಸಿದ ಪೋಸ್ಟರ್ ಗಳನ್ನು ಹಾನಿಗೊಳಿಸಿದ್ದಾರೆ ಎಂಬ ಆರೋಪವಿದೆ ಎಂದು ಸತ್ತೇನಪಲ್ಲಿ ಪೊಲೀಸ್ ಉಪ ಅಧೀಕ್ಷಕ (ಡಿಎಸ್ಪಿ) ಜಯರಾಮ್ ಪ್ರಸಾದ್ ಹೇಳಿದರು.
ಆಘಾತಕಾರಿ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ತೆಲುಗು ದೇಶಂ ಪಕ್ಷ (ಟಿಡಿಪಿ) ಅಪ್ರಾಪ್ತ ಮಕ್ಕಳಿಗೆ ಕಿರುಕುಳ ನೀಡಿದ ವೈಸಿಪಿ ನಾಯಕರು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.