alex Certify ವಿಶ್ವದ ಮಹಿಳೆಯರ ಅಂದ ಹೆಚ್ಚಿಸಿರುವ ಇಟಾಲಿಯನ್ ಜ್ಯುವೆಲ್ಲರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಮಹಿಳೆಯರ ಅಂದ ಹೆಚ್ಚಿಸಿರುವ ಇಟಾಲಿಯನ್ ಜ್ಯುವೆಲ್ಲರಿ

 

ಫ್ಯಾಷನ್ ಅನ್ನೋದು ನಿತ್ಯ ಬದಲಾಗೋ ಅದ್ಭುತ ಪ್ರಕ್ರಿಯೆ. ನಿನ್ನೆಯ ಫ್ಯಾಷನ್ ಇವತ್ತಿಗೆ ಹಳತು, ಮೊನ್ನೆಯ ಫ್ಯಾಷನ್​ ಇವತ್ತಿಗೆ ಇನ್ನೊಂದು ರೂಪದಲ್ಲಿ ಹೊಸತು. ಅದರಲ್ಲೂ ದೇಶ ವಿದೇಶದ ಸ್ಟೈಲ್, ಕಲರ್, ಸ್ಟೋನ್​​ಗಳಂತೂ ಬಹು ಕಾಲ ಟ್ರೆಂಡ್​ನಲ್ಲಿರುತ್ತವೆ. ಈ ನಿಟ್ಟಿನಲ್ಲಿ ಸದ್ಯ ಟ್ರೆಂಡ್​ನಲ್ಲಿದೆ ಇಟಾಲಿಯನ್ ಜ್ಯುವೆಲ್ಲರಿಗಳು. ಅದರಲ್ಲೂ ಮುಖ್ಯವಾಗಿ ಕಿವಿಯೋಲೆ ಮತ್ತು ಚೈನ್​ ಎಲ್ಲರ ಗಮನ ಸೆಳೆಯುತ್ತವೆ.

ಆಫೀಸ್, ಕಾಲೇಜು, ಫಾರ್ಮಲ್ಸ್, ಜೀನ್ಸ್, ಕುರ್ತಿಗೆ ಹೊಂದಿಕೆಯಾಗುವ ಈ ಇಟಾಲಿಯನ್ ಕಿವಿಯೋಲೆಗಳಿಗೆ ಭಾರೀ ಬೇಡಿಕೆ ಇದೆ. ಕ್ರಿಸ್ಟಲ್, ವೆಡ್​ಲಾಕ್​ ಟ್ರಯಂಗಲ್​ ಸ್ಟಡ್ಸ್​, ಸ್ಕೈ ಲಾಫ್ಸ್ ಡ್ರಾಪ್ಸ್, ಜಿಯೋ ಮಿಟ್ರಿಕ್ ಪ್ಯಾಟರ್ನ್, ಗೋಲ್ಡ್, ಕಾಫರ್ ಮತ್ತು ಪ್ಲಾಟಿನಮ್ ವಿನ್ಯಾಸ ಸೇರಿದಂತೆ ಸಟಲ್ ಕಲರ್​ಗಳಲ್ಲೂ ಕಣ್ಮನ ಸೆಳೆಯುತ್ತದೆ.

ಇಟಲಿ ಚಿನ್ನದ ಆಭರಣದ ವಿಷಯದಲ್ಲಿ ದೊಡ್ಡ ಸ್ಥಾನದಲ್ಲಿದೆ. ಸಣ್ಣ ಎಳೆಯ ಚೈನ್​ಗಳು ಇಟಾಲಿಯನ್ ಸ್ಟೈಲ್​ ಸ್ಟೇಟ್ಮೆಂಟ್​ಗಳಾಗಿವೆ. ವಿಶ್ವದ ಅನೇಕ ಮಹಿಳೆಯರು ಇಟಾಲಿಯನ್ ಕಿಚನ್​ಗಷ್ಟೇ ಅಲ್ಲದೇ ಅಲ್ಲಿನ ಆಭರಣ ವಿನ್ಯಾಸಗಳಿಗೂ ಪ್ರಾಮುಖ್ಯತೆ ನೀಡುತ್ತಾರೆ. ಬಾಲಿವುಡ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಇಟಾಲಿಯನ್ ಆಭರಣಗಳಿಗೆ ಮನಸೋತಿದ್ದಾರೆ.

ನೀವು ಆಭರಣ ಪ್ರಿಯರಲ್ಲದಿದ್ದರೆ, ಆದ್ರೂ ಜ್ಯುವೆಲ್ಲರಿ ಧರಿಸಲೇಬೇಕು ಎನ್ನುವ ಸಂದರ್ಭದಲ್ಲಿ ಇಟಾಲಿಯನ್ ಡಿಸೈನ್ಸ್ ಮೊರೆ ಹೋಗಬಹುದು. ಅದ್ದೂರಿತನವಿಲ್ಲದೇ ಬಹಳ ಸರಳವಾಗಿ ಈ ಆಭರಣಗಳು ವಿನ್ಯಾಸವಾಗಿರುತ್ತವೆ. ಸಟಲ್ ಡಿಸೈನ್ಸ್, ಹೆಚ್ಚು ಕಟ್ಸ್ ಇರದ ಆಕರ್ಷಕ ಡಿಸೈನ್ಸ್​ಗಳು ನಿಮ್ಮನ್ನು ಆಭರಣ ಪ್ರಿಯರನ್ನಾಗಿಸುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...