alex Certify ಪ್ರಾಜೆಕ್ಟ್ ಯೋಜಕ್’ ಹೆಸರಿನಲ್ಲಿ ಭಾರತದಲ್ಲಿ ಆರಂಭವಾಗುತ್ತಿದೆ ವಿಶ್ವದ ಅತಿ ಎತ್ತರ ಮತ್ತು ಉದ್ದದ ಸುರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಜೆಕ್ಟ್ ಯೋಜಕ್’ ಹೆಸರಿನಲ್ಲಿ ಭಾರತದಲ್ಲಿ ಆರಂಭವಾಗುತ್ತಿದೆ ವಿಶ್ವದ ಅತಿ ಎತ್ತರ ಮತ್ತು ಉದ್ದದ ಸುರಂಗ

ನವದೆಹಲಿ: ಭಾರತವು ವಿಶ್ವದ ಅತಿ ಎತ್ತರದ ಮತ್ತು ಉದ್ದದ ಸುರಂಗಕ್ಕೆ ಸಾಕ್ಷಿಯಾಗಲಿದೆ. ಪ್ರಾಜೆಕ್ಟ್ ಯೋಜಕ್’ ಎಂದು ಹೆಸರಿಟ್ಟಿರುವ ಈ ಯೋಜನೆಗೆ ಕೇಂದ್ರದಿಂದ ಅನುಮೋದನೆ ನೀಡಲಾಗಿದೆ.

ಈ ಸುರಂಗವು 16,580 ಅಡಿ ಶಿಂಕು-ಲಾ ಪಾಸ್‌ನ ಕೆಳಗೆ ಹಾದುಹೋಗಲಿದ್ದು, ಲಡಾಖ್ ನ ಝನ್ಸ್ಕರ್ ಕಣಿವೆಯನ್ನು ಹಿಮಾಚಲ ಪ್ರದೇಶದ ಲಾಹೌಲ್ ಗೆ ಸಂಪರ್ಕಿಸಲಿದೆ. ಎರಡು ಪರ್ವತ ಪ್ರದೇಶಗಳ ನಡುವೆ ಸುರಕ್ಷಿತ, ಎಲ್ಲಾ ಹವಾಮಾನ ಸಂಪರ್ಕವನ್ನು ಒದಗಿಸುವ ಇದು 2025ರ ವೇಳೆಗೆ ಪೂರ್ಣಗೊಳ್ಳುವ ಗುರಿಯನ್ನು ಹೊಂದಿದೆ.

ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿ ಆರ್ ಒ) ಮುಖ್ಯಸ್ಥ ಜನರಲ್ ಲೆಫ್ಟಿನೆಂಟ್ ರಾಜೀವ್ ಚೌಧರಿ, ಈ ಸುರಂಗವು 4.25 ಕಿಮೀ ಉದ್ದವಿದ್ದು, ಮುಂದಿನ ವರ್ಷ ಜುಲೈ-ಆಗಸ್ಟ್‌ನಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಗಡಿ ರಸ್ತೆಗಳ ಮಹಾನಿರ್ದೇಶಕರು (DGBR) ಹೆದ್ದಾರಿಯ ಬ್ಲಾಕ್‌ಟಾಪ್‌ಗಳನ್ನು ಪೂರ್ಣಗೊಳಿಸಿದ ನಂತರ ಎಲ್ಲಾ ವಾಹನಗಳ ಚಲನೆಗೆ ಸುರಂಗವನ್ನು ಮುಕ್ತಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಗ್ರಾಮದ ಮನೆಗಳಿಗೆ ಬಾಗಿಲೇ ಇಲ್ಲ…..!

ವರದಿಗಳ ಪ್ರಕಾರ, ನಿಮ್ಮು-ದರ್ಚಾ ರಸ್ತೆ (ನಿಮ್ಮು ಝನ್ಸ್ಕಾರ್ ನಲ್ಲಿದ್ದರೆ ದರ್ಚಾ ಲಾಹೌಲ್‌ನಲ್ಲಿದೆ) ಬಳಿಕೆಯು ತಾಂತ್ರಿಕ ದೋಷಗಳಿಂದಾಗಿ 20 ವರ್ಷಗಳಿಂದ ಸ್ಥಗಿತಗೊಂಡಿದೆ.

ಅಟಲ್ ಸುರಂಗವು 13,000 ಅಡಿ ಎತ್ತರದ ರೋಹ್ಟಾಂಗ್ ಪಾಸ್‌ಗೆ ಸುರಕ್ಷಿತ ಪರ್ಯಾಯವನ್ನು ಒದಗಿಸುತ್ತದೆ ಮತ್ತು 10,000 ಅಡಿಗಳಷ್ಟು ಎತ್ತರದ ವಿಶ್ವದ ಅತಿ ಎತ್ತರದ ಸುರಂಗವಾಗಿದೆ. ನಿಮ್ಮು-ಪಡುಮ್-ದರ್ಚಾ ಹೆದ್ದಾರಿಯು ಮನಾಲಿ-ಲೇಹ್ ಮತ್ತು ಶ್ರೀನಗರ-ಲೇಹ್ ಹೆದ್ದಾರಿಗಳಿಗಿಂತ ಸುರಕ್ಷಿತವಾಗಿರುತ್ತದೆ.

ಪ್ರಸ್ತುತ, ಜನರು ಮನಾಲಿಯಿಂದ ಲೇಹ್ ರಸ್ತೆಯಲ್ಲಿ ದರ್ಚಾಗೆ 101 ಕಿಮೀ ಪ್ರಯಾಣಿಸಬೇಕು ಮತ್ತು ನಂತರ ಶಿಂಕು-ಲಾ ಪಾಸ್ ಮೂಲಕ ಝನ್ಸ್ಕಾರ್ ಕಣಿವೆಯನ್ನು ಪ್ರವೇಶಿಸಬೇಕು. ಈ ಸುರಂಗವು ಉತ್ತಮ ಸಂಪರ್ಕವನ್ನು ತರುವ ಮೂಲಕ ಝನ್ಸ್ಕಾರ್ ಕಣಿವೆಯ ವಾಣಿಜ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...