alex Certify ವಿಮಾನದಲ್ಲಿ ಇಲಿ ಕಾಟ; ಪ್ರಯಾಣ 1 ತಾಸು ವಿಳಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಇಲಿ ಕಾಟ; ಪ್ರಯಾಣ 1 ತಾಸು ವಿಳಂಬ

ಶ್ರೀನಗರ: ಶ್ರೀನಗರದಿಂದ ಜಮ್ಮುವಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಹಾರಾಟವು ಇಲಿಯೊಂದರ ಕಾಟದಿಂದ ಒಂದು ತಾಸು ವಿಳಂಬವಾಗಿದೆ.

ಶ್ರೀನಗರದ ಶೇಖ್ ಉಲ್-ಅಲಂ ನಿಲ್ದಾಣದಿಂದ ಈ ವಿಮಾನ ಮಧ್ಯಾಹ್ನ 2.15ಕ್ಕೆ ನಿರ್ಗಮಿಸಬೇಕಿತ್ತು. ಇಲಿ ಕಾಟದಿಂದ ಮುಕ್ತವಾಗಿ ಹಾರಾಟ ಆರಂಭಿಸುವ ಹೊತ್ತಿಗೆ 3.20 ಆಗಿತ್ತು. ಈ ಕುರಿತು ತನಿಖೆ ನಡೆಸುವಂತೆ ಡಿಜಿಸಿಎ ಆದೇಶಿಸಿದೆ.

ಟಾಟಾ ಮಾಲೀಕತ್ವದ ಏರ್ ಇಂಡಿಯಾ ವಿಮಾನದ ಹಾರಾಟವು ಗುರುವಾರ ಮಧ್ಯಾಹ್ನದ ಬಳಿಕ ಒಂದು ತಾಸು ವಿಳಂಬವಾಗಿತ್ತು. ಅಧಿಕಾರಿಗಳ ಹೇಳಿಕೆಯಂತೆ, ಶ್ರೀನಗರ-ಜಮ್ಮು ಏರ್ ಇಂಡಿಯಾ ಎಐ-822 ವಿಮಾನವು ಶ್ರೀನಗರ ಏರ್ಪೋರ್ಟ್‌ನಿಂದ ಹಾರಾಟ ಆರಂಭಿಸುವ ಪೂರ್ವದಲ್ಲಿ ಮೂಷಿಕ ದರ್ಶನವಾಗಿ ಈ ವಿಳಂಬ ಉಂಟಾಗಿದೆ.

ಇದೇ ಮೊದಲಲ್ಲ:

ಏರ್ ಇಂಡಿಯಾ ವಿಮಾನದಲ್ಲಿ ಇಲಿ ಕಾಟ ಇದೇ ಮೊದಲೇನಲ್ಲ. ಕಳೆದ ವರ್ಷ ದೆಹಲಿ-ನೆವಾರ್ಕ್ ಅಂತಾರಾಷ್ಟ್ರೀಯ ವಿಮಾನದಲ್ಲಿ ಹಾರಾಟದ ನಡುವೆ ಒಂದು ಬಾವಲಿ ಕಂಡಿತ್ತು. ಹೀಗಾಗಿ, ಪೈಲಟ್ ವಿಮಾನವನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ವಾಪಸ್ ತರಲು ನಿರ್ಧರಿಸಿದರು. ವನ್ಯಜೀವಿ ಅಧಿಕಾರಿಗಳು ಧಾವಿಸಿ ಬಂದು, ಬಾವಲಿಯ ಕಳೇಬರವನ್ನು ಹೊರತೆಗೆದಿದ್ದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Rychlé usnutí za Jak vyprat pantofle od špíny: třízázrové Top 7 Jak se 5 alternativ k bělidlu: produkty, které "dělají práci Vyhozené zbytečnosti: Jak efektivně využít použitý Přidejte si do ranní kávy Jak správně nakrmit cyklamen doma: jak