ಕಲಬುರ್ಗಿ: 545 ಪಿ ಎಸ್ ಐ ಹುದ್ದೆಗಳಿಗೆ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿ ಜಿಲ್ಲೆ ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಗನ್ ಮ್ಯಾನ್ ಅಯ್ಯಣ್ಣ ದೇಸಾಯಿಯನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
2012ರಲ್ಲಿ ಡಿ.ಆರ್.ಪೇದೆಯಾಗಿ ಆಯ್ಕೆಯಾಗಿದ್ದ ಅಯ್ಯಣ್ಣ ದೇಸಾಯಿ, ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಮೊದಲ ರ್ಯಾಂಕ್ ನಲ್ಲಿ ಪಾಸಾಗಿದ್ದರು. ಇನ್ ಸರ್ಸಿಸ್ ವಿಭಾಗದಲ್ಲಿ ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಪರೀಕ್ಷೆ ಬರೆದಿದ್ದು, ಅಯ್ಯಣ್ಣ ನಿಜವಾದ ಹೆಸರು ಹಯ್ಯಾಳಿ ಎನ್.ದೇಸಾಯಿ. ಅಕ್ರಮವಾಗಿ ಪರೀಕ್ಷೆ ಬರೆದ ಆರೋಪದಲ್ಲಿ ಅಯ್ಯಣ್ಣ ದೇಸಾಯಿ ಹಾಗೂ ಕಲಬುರ್ಗಿ ಸಿ ಎ ಆರ್ ಕಾನ್ಸ್ ಟೇಬಲ್ ರುದ್ರಗೌಡನನ್ನು ಸಿಐಡಿ ವಶಕ್ಕೆ ಪಡೆದಿದೆ.
ಪಿ ಎಸ್ ಐ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಕಾಶಿನಾಥ, ಮಂಜುನಾಥ ಮೇಳಕುಂದಿ, ದಿವ್ಯಾ ಹಾಗರಗಿ ಹಾಗು ಇಬ್ಬರು ಕೊಠಡಿ ಮೇಲ್ವಿಚಾರಕರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಸಿಐಡಿ ಪೊಲೀಸರು ಬಲೆ ಬೀಸಿದ್ದಾರೆ.