ಬೇಸಿಗೆಯಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಹಾಗೂ ಆರೋಗ್ಯವಾಗಿರಲು ಏನೆಲ್ಲ ಕಸರತ್ತು ಮಾಡ್ತೇವೆ. ಆದ್ರೆ ಕಣ್ಣನ್ನು ಮಾತ್ರ ಮರೆತು ಬಿಡುತ್ತೇವೆ. ಬಿಸಿಲ ಪರಿಣಾಮ ಮೊದಲು ಕಣ್ಣಿನ ಮೇಲಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆ ಅತ್ಯಗತ್ಯ.
ಸೂರ್ಯನ ಬಿಸಿಲಿಗೆ ಹೋಗುವ ಮೊದಲು ಸನ್ ಗ್ಲಾಸ್ ಅವಶ್ಯವಾಗಿ ಹಾಕಿಕೊಳ್ಳಿ. ಇದು ಯುವಿ ಕಿರಣಗಳಿಂದ ಕಣ್ಣನ್ನು ರಕ್ಷಿಸುತ್ತದೆ. ಗ್ಲಾಸ್ ಖರೀದಿ ವೇಳೆ ಕ್ವಾಲಿಟಿ ಬಗ್ಗೆ ಹೆಚ್ಚಿನ ಗಮನ ನೀಡಿ. ಕಡಿಮೆ ಬೆಲೆಯ, ಕ್ವಾಲಿಟಿಯಿಲ್ಲದ ಗ್ಲಾಸ್ ಗಳು ನಿಮ್ಮ ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತವೆ.
ಕಣ್ಣಿಗೆ ಜೆಲ್ ಮಸ್ಕಾರಾ ಬಳಸಿ. ಅಲೋವೇರಾ ಮಸ್ಕಾರಾ ಕಣ್ಣಿಗೆ ಬಹಳ ಒಳ್ಳೆಯದು. ಇದು ಕಣ್ಣನ್ನು ತಂಪಾಗಿಡಲು ನೆರವಾಗುತ್ತದೆ. ಅಲೋವೇರಾ ಜೆಲ್ ಮಸ್ಕಾರವನ್ನು ಫ್ರಿಜ್ ನಲ್ಲಿಡಿ. ಪ್ರತಿ ಬಾರಿ ಬಳಕೆ ನಂತ್ರ ಬೇಬಿ ವೈಪ್ಸ್ ನಲ್ಲಿ ಕ್ಲೀನ್ ಮಾಡಿ ಮತ್ತೆ ಫ್ರಿಜ್ ನಲ್ಲಿಡಿ.
ಮರಿ ಕೋತಿಗೆ ಬಾಟಲಿ ಮೂಲಕ ಹಾಲು; ಹೃದಯಸ್ಪರ್ಶಿ ವಿಡಿಯೋ ಫುಲ್ ವೈರಲ್
ಗುಲಾಬಿ ನೀರು ಕೂಡ ಕಣ್ಣಿಗೆ ಬಹಳ ಒಳ್ಳೆಯದು. ಆದ್ರೆ ಎಲ್ಲರ ಕಣ್ಣಿಗೂ ಇದು ಸರಿಹೊಂದುವುದಿಲ್ಲ. ವೈದ್ಯರ ಬಳಿ ಕೇಳಿ ಬಳಸುವುದು ಸೂಕ್ತ.
ಕಣ್ಣಿನ ರಕ್ಷಣೆಗಾಗಿ ಬೇಸಿಗೆಯಲ್ಲಿ ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ವಿಟಮಿನ್ ಹೆಚ್ಚಿರುವ ಕ್ಯಾರೆಟ್, ಹಾಲು, ಮೊಟ್ಟೆ, ಹಸಿರು ಸೊಪ್ಪುಗಳನ್ನು ಹೆಚ್ಚಾಗಿ ಸೇವನೆ ಮಾಡಿ.
ಕಣ್ಣಿಗಿಂತ ಕೆಲಸ ದೊಡ್ಡದಲ್ಲ. ಕೆಲಸದ ಮಧ್ಯೆ ಅರ್ಧ ಗಂಟೆಗೊಮ್ಮೆ ವಿಶ್ರಾಂತಿ ಪಡೆಯಿರಿ. ಕಣ್ಣನ್ನು ಮುಚ್ಚಿ ಅಥವಾ ಅತ್ತಿತ್ತ ನೋಡಿ ಕಣ್ಣಿಗೆ ವಿಶ್ರಾಂತಿ ನೀಡಿ.
ತಲೆ ನೋವು ಅಥವಾ ಕಣ್ಣಿನ ಸಮಸ್ಯೆ ಕಾಡಿದ್ರೆ ನಿರ್ಲಕ್ಷ್ಯ ಬೇಡ. ತಕ್ಷಣ ಕಣ್ಣಿನ ತಜ್ಞರ ಬಳಿ ಹೋಗಿ.