alex Certify ಫುಡ್‌ ಪ್ಯಾಕೆಟ್ ಮೇಲೆ ʼಅರೇಬಿಕ್‌ʼ ಭಾಷೆ ಇರುವುದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಡ್‌ ಪ್ಯಾಕೆಟ್ ಮೇಲೆ ʼಅರೇಬಿಕ್‌ʼ ಭಾಷೆ ಇರುವುದರ ಹಿಂದಿದೆ ಈ ಕಾರಣ

ಹಲಾಲ್‌ ಕಟ್‌ ಹಾಗೂ ಜಟ್ಕಾ ಕಟ್‌ ವಿವಾದ ತಾರಕಕ್ಕೇರುತ್ತಿದ್ದಂತೆ ಗ್ರಾಹಕರು ಫುಡ್‌ ಪ್ಯಾಕೆಟ್‌ ಮೇಲಿರೋ ಬರಹಗಳನ್ನೆಲ್ಲ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಶುರು ಮಾಡಿದ್ದಾರೆ. ಹಲ್ದಿರಾಮ್ ಕಂಪನಿಯ ಆಹಾರದ ಪ್ಯಾಕೆಟ್‌ಗಳಲ್ಲಿ “ಉರ್ದು” ಬಳಸಲಾಗಿದೆ ಎಂದು ಟಿವಿ ಚಾನೆಲ್ ಒಂದರಲ್ಲಿ ವರದಿ ಬಿತ್ತರವಾಗಿತ್ತು. ಇದೇ ವಿಚಾರ ಇಂಟರ್ನೆಟ್‌ ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ತಯಾರಕರು ವಿವಿಧ ಭಾಷೆಗಳನ್ನು ಯಾಕೆ ಬಳಸ್ತಿದ್ದಾರೆ ಅನ್ನೋದನ್ನು ಅರ್ಥ ಮಾಡಿಕೊಳ್ಳುವಲ್ಲಿ ಜನರು ವಿಫಲರಾಗ್ತಿದ್ದಾರೆ. ಗ್ರಾಹಕರಿಗೆ ಅರ್ಥವಾಗದ ಭಾಷೆ ಬಳಸಿಕೊಂಡು ಪದಾರ್ಥಗಳ ಬಗ್ಗೆ ತಪ್ಪುದಾರಿಗೆಳೆಯುತ್ತಿದ್ದಾರೆ ಅನ್ನೋದು ಕೆಲವರ ಆರೋಪ.

ಹಲ್ದಿರಾಮ್ಸ್ ಭಾರತೀಯ ಮೂಲದ ಪ್ರಸಿದ್ಧ ಅಂತಾರಾಷ್ಟ್ರೀಯ ಬ್ರ್ಯಾಂಡ್. ಗಲ್ಫ್‌ನಲ್ಲಿ ಹಲ್ದಿರಾಮ್ಸ್‌ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ. ಅರಬ್ ಜನರನ್ನು ತಲುಪಲು ಅನೇಕ ಭಾರತೀಯ ಬ್ರ್ಯಾಂಡ್‌ಗಳು ಅಲ್ಲಿನ ಸ್ಥಳೀಯ ಭಾಷೆ ಅರೇಬಿಕ್ ಅನ್ನು ಬಳಸುತ್ತವೆ. ಬಹ್ರೇನ್, ಇರಾಕ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಹಲ್ದಿರಾಮ್‌ ಗೆ ಡಿಮ್ಯಾಂಡ್‌ ಇದೆ.

ಮಧ್ಯಪ್ರಾಚ್ಯದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಇತರ ಬ್ರ್ಯಾಂಡ್‌ಗಳೆಂದರೆ ಪ್ರಿಯಾ ಗೋಲ್ಡ್, ಪಾರ್ಲೆ, ಅಲನಾಸನ್ಸ್, ಅಮೀರಾ, ಬಾನ್, ಕ್ರೆಮಿಕಾ, ಡ್ಯೂಕ್ಸ್, ಇಂಡಿಯಾ ಗೇಟ್, ಎಂಟಿಆರ್, ಮದರ್ಸ್ ರೆಸಿಪಿ, ರಾಮ್‌ದೇವ್ ಮತ್ತು ರಸ್ನಾ. ವಿವಿಧ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳ ಸಮ್ಮಿಲನದಲ್ಲಿ ಭಾರತ  ಸುದೀರ್ಘ ಇತಿಹಾಸವನ್ನು ಹೊಂದಿದೆ. ಕೆಲವೇ ಕೆಲವು ಕಿಲೋಮೀಟರ್‌ಗಳಿಗೆ  ಭಾಷೆ ಬದಲಾಗುತ್ತದೆ. ಆದ್ಯತೆಗಳು ಮತ್ತು ಭಾವನೆಗಳು ಕೂಡ ಬದಲಾಗುತ್ತವೆ. ಇದೇ ಕಾರಣಕ್ಕೆ ಹೆಚ್ಚಿನ ಫುಡ್‌ ಬ್ರಾಂಡ್‌ಗಳು ಜನರನ್ನು ತಲುಪಲು ಉತ್ಪನ್ನಗಳಲ್ಲಿ ಬಹು ಭಾಷೆಗಳನ್ನು ಬಳಸುತ್ತವೆ.

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ನಂತರ ಹಲ್ದಿರಾಮ್ಸ್‌ ವಿವಾದ ಶುರುವಾಯ್ತು. ನಮ್ಕೀನ್ ಮಿಕ್ಸ್ಚರ್‌ ಪ್ಯಾಕೇಜಿಂಗ್‌ನಲ್ಲಿದ್ದ “ಉರ್ದು” ವಿವರಣೆಗಾಗಿ ಹಲ್ದಿರಾಮ್‌ನ ಔಟ್‌ಲೆಟ್‌ ಸ್ಟೋರ್ ಮ್ಯಾನೇಜರ್‌ಗೆ ಕಿರುಕುಳ ನೀಡುತ್ತಿದ್ದರು. ‘ಫಲ್ಹಾರಿ ಮಿಶ್ರಣ’ವನ್ನು ಅರೇಬಿಕ್‌ನಲ್ಲಿ ಬರೆಯಲಾಗಿದೆ.  ಮುಂಭಾಗದಲ್ಲಿರುವ ಬರಹ ಇಂಗ್ಲಿಷ್‌ನಲ್ಲಿದೆ. ಸಸ್ಯಾಹಾರಿ ಚಿಹ್ನೆ ಕೂಡ ಸ್ಪಷ್ಟವಾಗಿದೆ.

ವಿಡಿಯೋದಲ್ಲಿ ವರದಿಗಾರ್ತಿ ಮ್ಯಾನೇಜರ್ ಮುಖದ ಮುಂದೆ ಮೈಕ್ ಇಟ್ಟು ಬಲವಂತವಾಗಿ ಸಂದರ್ಶನ ರೆಕಾರ್ಡ್ ಮಾಡುವುದನ್ನು ಕಾಣಬಹುದು. ಈ ಘರ್ಷಣೆಗೆ ಜನಸಮೂಹ ಹಾಗೂ ಪೊಲೀಸ್‌ ಅಧಿಕಾರಿ ಕೂಡ ಸಾಕ್ಷಿಯಾಗಿದ್ದಾರೆ. “ಉರ್ದು” ಭಾಷೆಯಲ್ಲಿ ನಮ್ಕೀನ್ ಪ್ಯಾಕೆಟ್‌ನ ವಿವರಣೆಯನ್ನು ಮರೆಮಾಚುವ ಮೂಲಕ ಹಲ್ದಿರಾಮ್ ಏನನ್ನು ಮರೆಮಾಡಲು ಪ್ರಯತ್ನಿಸುತ್ತಿದೆ ಅಂತಾ ವರದಿಗಾರ್ತಿ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ್ದಾಳೆ. ಪ್ಯಾಕೆಟ್‌ನಲ್ಲಿರುವ ಆಹಾರ ಆರೋಗ್ಯಕ್ಕೆ ಅಪಾಯಕಾರಿಯಲ್ಲ ಎಂದ ವ್ಯವಸ್ಥಾಪಕರು ಅಂಗಡಿಯಿಂದ ಹೊರಹೋಗುವಂತೆ ವರದಿಗಾರ್ತಿಗೆ ಮನವಿ ಮಾಡಿದ್ದಾರೆ.

ಭಾರತೀಯ ರಾಯಭಾರಿ ಕಚೇರಿಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಯುಎಇ ಭಾರತದ ಎರಡನೇ ಅತಿ ದೊಡ್ಡ ರಫ್ತು ತಾಣವಾಗಿದ್ದು, ಸುಮಾರು 41.43 ಬಿಲಿಯನ್ ಡಾಲರ್‌ ಮೌಲ್ಯದ (ತೈಲೇತರ ವ್ಯಾಪಾರ) ವಹಿವಾಟು ನಡೆಸುತ್ತಿದೆ. ಇದಲ್ಲದೆ ಗಲ್ಫ್‌ಗೆ ಭಾರತದ ಧಾನ್ಯಗಳು, ಸಕ್ಕರೆ, ಹಣ್ಣು- ತರಕಾರಿಗಳು, ಚಹಾ, ಮಾಂಸ ಮತ್ತು ಸಮುದ್ರಾಹಾರ ರಫ್ತಾಗುತ್ತದೆ.  UAEಯಲ್ಲಿ ಭಾರತದ ಉಡುಪುಗಳು, ಪ್ರಾಚೀನ ವಸ್ತುಗಳು, ಕಲಾಕೃತಿಗಳು, ವಿದ್ಯುತ್ ಉಪಕರಣಗಳು, ಸೌಂದರ್ಯ ವರ್ಧಕಗಳು, ಧಾನ್ಯಗಳು, ಪಾದರಕ್ಷೆಗಳು, ಗಡಿಯಾರಗಳು, ವಾಚ್‌ ಮತ್ತು ಮುತ್ತು ರತ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...