ಮಹಿಳೆಯೊಬ್ಬರಿಗೆ ಸಿಂಧೂರ ಧರಿಸಿದ್ದಾರೆ ಎಂಬ ಕಾರಣಕ್ಕೆ ಬಾಂಗ್ಲಾ ಪೊಲೀಸ್ ಪೇದೆ ಕಿರುಕುಳ ನೀಡಿರುವ ವಿಚಾರವು ವ್ಯಾಪಕ ಟೀಕೆಗೆ ಗುರಿಯಾಗಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸೋಶಿಯಲ್ ಮೀಡಿಯಾಗಳಲ್ಲಿ ಕೂಗು ಕೇಳಿ ಬರುತ್ತಿದೆ.
ಏಪ್ರಿಲ್ 2ರಂದು ಢಾಕಾದ ತೇಜಗಾಂವ್ ಕಾಲೇಜಿನಲ್ಲಿ ರಂಗಭೂಮಿ ಮತ್ತು ಮಾಧ್ಯಮ ಅಧ್ಯಯನದ ಉಪನ್ಯಾಸಕಿ ಲತಾ ಸಮದ್ದಾರ್ ಶೇರ್ ಎ ಬಾಂಗ್ಲಾ ನಗರ ಪ್ರದೇಶದಲ್ಲಿ ತನಗೆ ಹಾಡಹಗಲೇ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ನಾನು ಕಾಲೇಜು ಮಾರ್ಗವಾಗಿ ತೆರಳುತ್ತಿದ್ದ ವೇಳೆಯಲ್ಲಿ, ಉದ್ದವಾದ ಗಡ್ಡವನ್ನು ಹೊಂದಿದ್ದ ಮಧ್ಯಮ ವಯಸ್ಸಿನ ಪೊಲೀಸ್ ಪೇದೆಯು ನನ್ನ ಬಳಿ ಬಂದು ಸಿಂಧೂರ ಏಕೆ ಹಾಕಿದ್ದೀರಿ..? ಎಂದು ಪ್ರಶ್ನೆ ಮಾಡಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಹೇಳಿದ್ದಾರೆ.
ಸಿಂಧೂರ ಧರಿಸಿದ ಕಾರಣಕ್ಕೆ ಮಹಿಳೆಯರಿಗೆ ಕಿರುಕುಳ ನೀಡಿದ ಕಾರಣಕ್ಕೆ ಪೊಲೀಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಲ್ಲೆಡೆ ಕೂಗು ಕೇಳಿ ಬಂದಿದೆ.