ಮಂಗಗಳಿಂದ ಬೆಳೆ ರಕ್ಷಿಸಿಕೊಳ್ಳಲು ಕರಡಿ ವೇಷ ಧರಿಸಿದ ರೈತ…! 01-04-2022 6:06AM IST / No Comments / Posted In: Agriculture, Agriculture News, Latest News, India, Live News ರೈತರು ಬಹಳ ಕಷ್ಟಪಟ್ಟು ಬೆಳೆದ ಬೆಳೆಯನ್ನು ಕೋತಿಗಳು ಅಥವಾ ಬಿಡಾಡಿ ದನಗಳು ಕೆಲವೊಮ್ಮೆ ಹಾಳು ಮಾಡಿಬಿಡುತ್ತವೆ. ಹೀಗಾಗಿ ವ್ಯಕ್ತಿಯೊಬ್ಬರು ತಮ್ಮ ಹೊಲವನ್ನು ರಕ್ಷಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ದೇಶದೆಲ್ಲೆಡೆ ರೈತರು ಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಲು ಬೈ ಹುಲ್ಲಿನ ಗುಮ್ಮಾಗಳನ್ನು ಬಳಸುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಸ್ವತಃ ತಾವೇ ಕರಡಿಯಂತೆ ವೇಷ ಧರಿಸಿ ಸುದ್ದಿಯಾಗಿದ್ದಾರೆ. ತೆಲಂಗಾಣದ ರೈತ ಭಾಸ್ಕರ್ ರೆಡ್ಡಿ ತನ್ನ ಬೆಳೆಗಳನ್ನು ರಕ್ಷಿಸಲು ಈ ರೀತಿಯ ವೇಷ ತೊಟ್ಟಿದ್ದಾರೆ. ತೆಲಂಗಾಣದ ಸಿದ್ದಿಪೇಟ್‌ನಲ್ಲಿ ತನ್ನ ಬೆಳೆಗಳನ್ನು ಕೊಯ್ಲು ಮಾಡುವ ಮುನ್ನ ಕಾಡು ಹಂದಿಗಳು ಮತ್ತು ಮಂಗಗಳು ನಾಶ ಮಾಡಿಬಿಡುತ್ತಿದ್ದವು. ಹೀಗಾಗಿ ರೆಡ್ಡಿ ಈ ವಿಶಿಷ್ಟ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ರೆಡ್ಡಿ ಮತ್ತು ಅವರ ಮಗ ಹೊಲಗಳಿಗೆ ತೆರಳುವಾಗ ಕರಡಿ ವೇಷಭೂಷಣವನ್ನು ಧರಿಸಿ ಹೋಗುತ್ತಾರೆ. ಇದೀಗ ಇದಕ್ಕಾಗಿ ವ್ಯಕ್ತಿಯೊಬ್ಬನನ್ನು ನೇಮಿಸಲಾಗಿದೆ. ಆತನಿಗೆ ಪ್ರತಿದಿನಕ್ಕೆ 500 ರೂ. ಮೊತ್ತ ನಿಗದಿಪಡಿಸಲಾಗಿದೆ. ಇದರಿಂದ ಪ್ರಾಣಿಗಳ ಉಪಟಳ ಕಡಿಮೆಯಾಗಿದೆಯಂತೆ. ಭಾರತದಲ್ಲಿ ಹಲವಾರು ರೈತರು ತಮ್ಮ ಸಮಸ್ಯೆಗಳನ್ನು ವಿಶಿಷ್ಟ ವಿಧಾನದ ಮೂಲಕ ಪರಿಹರಿಸಲು ಮುಂದಾಗುತ್ತಿದ್ದಾರೆ. ಇದು ನೆಟ್ಟಿಗರ ಗಮನಸೆಳೆದಿದ್ದು, ಹಲವಾರು ಮಂದಿ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. Telangana | Bhaskar Reddy, a farmer in Siddipet’s Koheda uses a sloth bear costume to keep monkeys & wild boars away from damaging the crop. "I've hired a person for Rs 500 a day to wear the costume & walk around the field to keep the animals away," he said (30.03) pic.twitter.com/YVHyP4ZUGh — ANI (@ANI) March 30, 2022