ನೀವು ರೆಸ್ಟೋರೆಂಟ್ನಲ್ಲಿ ಊಟ ಮಾಡುವಾಗ ಒಂದು ವೇಳೆ ನಿಮಗೆ ಆಹಾರ ಹೆಚ್ಚಾದ್ರೆ ಏನು ಮಾಡುತ್ತೀರಾ..? ಬಹುಶಃ ತಟ್ಟೆಯಲ್ಲಿ ವೇಸ್ಟ್ ಮಾಡಬಹುದು. ಕೆಲವರು ಉಳಿದ ಆಹಾರವನ್ನು ಪ್ಯಾಕ್ ಮಾಡಿ ಕೊಡುವಂತೆ ಕೇಳುತ್ತಾರೆ. ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ, ನೀವು ಕೂಡ ಹೋಟೆಲ್ ಗಳಿಗೆ ಹೋದಾಗ ಹೀಗೆ ಮಾಡಬಹುದು.
ಹೌದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಆಹಾರ ಹೆಚ್ಚಾಗಿದ್ದಕ್ಕೆ ತಾನು ತಂದಿರೋ ಬಾಕ್ಸ್ ಗೆ ಊಟವನ್ನು ಹಾಕಿದ್ದಾರೆ. ರೆಸ್ಟೋರೆಂಟ್ಗಳು ಒದಗಿಸುವ ಪ್ಲಾಸ್ಟಿಕ್ ಕಂಟೈನರ್ಗಳನ್ನು ಅವಲಂಬಿಸುವುದಕ್ಕಿಂತ ಇದು ಒಳ್ಳೆಯದು. ಇದರ ಬಗ್ಗೆ ಮುಜುಗರಪಡುವ ಅಗತ್ಯವಿಲ್ಲ.
ನಯನಾ ಪ್ರೇಮನಾಥ್ ಎಂಬುವವರು ರೆಸ್ಟೊರೆಂಟ್ನಲ್ಲಿ ಉಳಿದ ಆಹಾರವನ್ನು, ಮನೆಯಿಂದ ತಂದಿರೋ ಸ್ಟೀಲ್ ಕಂಟೇನರ್ಗೆ ಪ್ಯಾಕ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಂತಹ ಅಭ್ಯಾಸವನ್ನು ಎಲ್ಲರೂ ಮಾಡುವುದು ಒಳ್ಳೆಯದು ಎಂದು ಅವರು ಹೇಳಿದ್ದಾರೆ.
ಉಳಿದ ಆಹಾರವನ್ನು ಸ್ನೇಹಿತರು ಅಥವಾ ಕುಟುಂಬದವರ ಮುಂದೆ ಪ್ಯಾಕ್ ಮಾಡಲು ಕೆಲವರು ಮುಜುಗರಪಡಬಹುದು. ಇಂದು, ನಾವು ರೆಸ್ಟೋರೆಂಟ್ಗೆ ಹೋದಾಗಲೆಲ್ಲಾ ಡಬ್ಬ ತೆಗೆದುಕೊಂಡು ಹೋಗಬೇಕೆಂದು ತಾಯಿ ನೆನಪಿಸುತ್ತಾರೆ. ತನ್ನ ಸಹೋದರಿ ಕೆಫೆಗಳಲ್ಲಿ ಬಳಸಲು ತನ್ನದೇ ಆದ ಸ್ಟ್ರಾಗಳನ್ನು ಒಯ್ಯುತ್ತಾಳೆ. ತನ್ನ ತಂದೆ ಆಹಾರವನ್ನು ಡಬ್ಬಾಕ್ಕೆ ಹಾಕಿರುವುದು ನೋಡಿದ್ರೆ ಖುಷಿಯಾಗಿದೆ ಎಂದು ನಯನಾ ತಿಳಿಸಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಇಂತಹ ಉತ್ತಮ ಅಭ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.