ಸೇನೆ ಸೇರುವ ಕನಸಿಗೆ ಮತ್ತಷ್ಟು ಬಲ; ಮಧ್ಯರಾತ್ರಿ 10 ಕಿ.ಮೀ. ಓಡುತ್ತಿದ್ದ ಯುವಕನಿಗೆ ಸಿಕ್ಕಿದೆ ಸಹಾಯಹಸ್ತ 22-03-2022 9:34AM IST / No Comments / Posted In: Latest News, India, Live News ಉತ್ತರಾಖಂಡ್ನ ಅಲ್ಮೋರಾದ ನಿವಾಸಿ ಪ್ರದೀಪ್ ಮೆಹ್ರಾ ರಾತ್ರೋ ರಾತ್ರಿ ಇಂಟರ್ನೆಟ್ನಲ್ಲಿ ಸ್ಟಾರ್ ಆಗಿದ್ದಾರೆ. ಸೇನೆಗೆ ಸೇರೆಬೇಕೆಂದು ಕನಸು ಹೊತ್ತಿರುವ ಈ ಯುವಕ ಮಧ್ಯರಾತ್ರಿ 10 ಕಿಮೀ ದೂರ ಓಡುವ ಮೂಲಕ ತನ್ನ ಕನಸನ್ನು ನನಸು ಮಾಡಿಕೊಳ್ಳುವತ್ತ ಮುಂದಡಿ ಇಡುತ್ತಿದ್ದಾರೆ ಎಂಬ ವಿಚಾರ ಇಂಟರ್ನೆಟ್ನಲ್ಲಿ ಕಾಡ್ಗಿಚ್ಚಿನಲ್ಲಿ ಹರಡುತ್ತಿದ್ದಂತೆಯೇ ಇದೀಗ ಪ್ರದೀಪ್ಗೆ ಸಹಾಯ ಹಸ್ತವೊಂದು ಕೈ ಚಾಚಿದೆ. ನಿವೃತ್ತ ಲೆ. ಜನರಲ್ ಸತೀಶ್ ದುವಾ ಈ ಯುವಕನ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ತಾನು ಈತನ ಕನಸನ್ನು ನನಸು ಮಾಡಲು ಸಹಾಯ ನೀಡುತ್ತೇನೆ ಎಂದು ಹೇಳಿದ್ದಾರೆ. ಪ್ರಶಸ್ತಿ ವಿಜೇತ ಫಿಲಂ ಮೇಕರ್ ವಿನೋದ್ ಕಪ್ರಿ ಸೋಶಿಯಲ್ ಮೀಡಿಯಾದಲ್ಲಿ ಈ ಯುವಕನ ವಿಡಿಯೋವನ್ನು ಶೇರ್ ಮಾಡಿದ್ದರು. ಇದರಲ್ಲಿ ಯುವಕ ತಾನು ಪ್ರತಿದಿನ ರಾತ್ರಿ ನೋಯ್ಡಾ ಸೆಕ್ಟರ್ 16 ರಿಂದ ಬರೋಲಾದವರೆಗೆ ಓಡಿಕೊಂಡೇ ಸಾಗುವುದಾಗಿ ಹೇಳಿದ್ದ. ಸೇನೆಗೆ ಸೇರುವ ಸಲುವಾಗಿ ತಾನು ಪ್ರತಿದಿನ ಈ ರೀತಿ ಅಭ್ಯಾಸ ಮಾಡುತ್ತಿರೋದಾಗಿ ಹೇಳಿಕೊಂಡಿದ್ದ. His Josh is commendable, and to help him pass the recruitment tests on his merit, I've interacted with Colonel of KUMAON Regiment, Lt Gen Rana Kalita, the Eastern Army Commander. He is doing the needful to train the boy for recruitment into his Regiment.Jai Hind 🇮🇳 https://t.co/iasbkQvvII — Lt Gen Satish Dua 🇮🇳 (@TheSatishDua) March 21, 2022 https://twitter.com/vinodkapri/status/1505535421589377025?ref_src=twsrc%5Etfw%7Ctwcamp%5Etweetembed%7Ctwterm%5E1505535421589377025%7Ctwgr%5E%7Ctwcon%5Es1_&ref_url=https%3A%2F%2Fnews.abplive.com%2Fnews%2Fretired-indian-general-satish-dua-offers-to-help-19-yr-old-boy-pradeep-mehra-after-his-midnight-run-video-went-viral-video-1520851