alex Certify ’ಅಪ್ನಾ ಟೈಮ್‌ ಆಯೇಗಾ’ ಹಾಡಿದ ಪಾಕ್‌ ಕ್ರಿಕೆಟ್‌ ಆಟಗಾರ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಅಪ್ನಾ ಟೈಮ್‌ ಆಯೇಗಾ’ ಹಾಡಿದ ಪಾಕ್‌ ಕ್ರಿಕೆಟ್‌ ಆಟಗಾರ್ತಿ

ಪಾಕಿಸ್ತಾನದ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಬಿಸ್ಮಾ ಮರೂಫ್‌ ಅವರ ಆರು ತಿಂಗಳ ಮಗುವಿನ ಜತೆಗೆ ಭಾರತೀಯ ಕ್ರಿಕೆಟ್‌ ತಂಡದ ಆಟಗಾರ್ತಿಯರು ಆಟವಾಡಿದ ವಿಡಿಯೊ ಇತ್ತೀಚೆಗೆ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಈಗ ಪಾಕ್‌ ತಂಡದ ಮತ್ತೊಬ್ಬ ಆಟಗಾರ್ತಿ ಡಯಾನಾ ಬೇಗ್‌ ಅವರು ಬಾಲಿವುಡ್‌ ಸಿನಿಮಾ ’ಗಲ್ಲಿ ಬಾಯ್‌’ನ ’ಅಪ್ನಾ ಟೈಮ್‌ ಆಯೇಗಾ’ ಹಾಡು ಹಾಡಿರುವುದು ಈಗ ವೈರಲ್‌ ಆಗಿದೆ.

ಐಸಿಸಿ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಕಿಸ್ತಾನಿ ಆಟಗಾರ್ತಿಯರು ಪಂದ್ಯಗಳನ್ನು ಆಡುತ್ತಿದ್ದು, ಇದರ ಮಧ್ಯೆಯೇ ಸ್ಪೋರ್ಟ್ಸ್ ಆ್ಯಂಕರ್‌ ಆಗಿರುವ ಭಾರತದ ಸಂಜನಾ ಗಣೇಶನ್‌ ಅವರಿಗೆ ಸಂದರ್ಶನ ನೀಡುವಾಗ, ’ಅಪ್ನಾ ಟೈಮ್‌ ಆಯೇಗಾ’ ಹಾಡು ಹಾಡಿದ್ದಾರೆ. ಕ್ರಿಕೆಟ್‌ ಆಟಗಾರ್ತಿಯ ಗಾಯನ ಕೌಶಲಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ)ಯ ಇನ್‌ಸ್ಟಾಗ್ರಾಂನ ಅಧಿಕೃತ ಖಾತೆಯಿಂದ ’ಡ್ರಾಪಿಂಗ್‌ ಸಮ್‌ ಬಾರ್ಸ್‌’ ಎಂಬ ಒಕ್ಕಣೆ ಹಾಕಿ ವಿಡಿಯೊವನ್ನು ಪೋಸ್ಟ್‌ ಮಾಡಲಾಗಿದೆ. ಬೇಗ್‌ ಅವರು ಉತ್ತಮವಾಗಿ ಹಾಡಿರುವುದರಿಂದ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ, ಭಾರತದ ಜನರು ಶ್ಲಾಘಿಸಿದ್ದಾರೆ.

ಸುಶಾಂತ್ ಸಿಂಗ್‍ ರ ʼಖೈರಿಯಾತ್ʼ ಹಾಡಿಗೆ ಲಿಪ್ ಸಿಂಕ್ ಮಾಡಿದ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪಾಲ್

ಅಪ್ನಾ ಟೈಮ್‌ ಆಯೇಗಾ ರ‍್ಯಾಪ್ ಸಾಂಗ್‌ ಆಗಿದ್ದು, ಇದನ್ನು ಹಾಡುವಾಗ ಬೇಗ್‌ ಅವರು ಒಂದಷ್ಟು ಪದಗಳನ್ನು ಮಿಸ್‌ ಮಾಡಿದರೂ ಅವರು ಹಾಕಿದ ಪರಿಶ್ರಮ ಹಾಗೂ ಕೌಶಲಕ್ಕೆ ಜನ ತಲೆದೂಗಿದ್ದಾರೆ. ಗಲ್ಲಿ ಬಾಯ್‌ ಸಿನಿಮಾ 2019ರಲ್ಲಿ ಬಿಡುಗಡೆಯಾಗಿದ್ದು, ರಣವೀರ್‌ ಸಿಂಗ್‌ ಹಾಗೂ ಆಲಿಯಾ ಭಟ್‌ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಹಿಟ್‌ ಆಗಿದ್ದು, ಸಿನಿಮಾದಷ್ಟೇ ‘ಅಪ್ನಾ ಟೈಮ್‌ ಆಯೇಗಾ’ ಹಾಡು ಸಹ ಹಿಟ್‌ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...