ಯುದ್ಧ ಪೀಡಿತ ಉಕ್ರೇನ್‌ನಲ್ಲಿ ‘ವಾಟ್ ಎ ವಂಡರ್‌ಫುಲ್ ವರ್ಲ್ಡ್’ ನುಡಿಸಿದ ಮಹಿಳೆ..! 07-03-2022 11:28AM IST / No Comments / Posted In: Latest News, Live News, International ಯಾವುದೇ ದೇಶಗಳ ನಡುವೆ ಯುದ್ಧವಾದ್ರೆ ಒಂದು ಮಾತಿದೆ. ಗೆದ್ದವನು ಸೋತ, ಸೋತವನು ಸತ್ತ ಎಂದು. ಯುದ್ಧದಿಂದ ಕೇವಲ ದುಃಖವೇ ಹೊರತು ಇನ್ನೇನು ಸಿಗೋದಿಲ್ಲ. ಇದೀಗ ಉಕ್ರೇನ್ ಮೇಲೆ ರಷ್ಯಾ ಆಕ್ರಮಣವೆಸಗುತ್ತಿದೆ. ಇದರಿಂದ ತಮ್ಮ ಜೀವ ಉಳಿಸಲು ನಾಗರಿಕರು ಉಕ್ರೇನ್ ಬಿಟ್ಟು ಪಲಾಯನಗೈಯುತ್ತಿದ್ದಾರೆ. ಉಕ್ರೇನ್‌ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಆದರೆ, ಯುದ್ಧ ಪೀಡಿತ ದೇಶದಿಂದ ಸುಂದರ ವಿಡಿಯೋವೊಂದು ವೈರಲ್ ಆಗಿದೆ. ಮಹಿಳೆಯೊಬ್ಬರು ಪಿಯಾನೋ ನುಡಿಸಿದ್ದಾರೆ. ವೈರಲ್ ವಿಡಿಯೋದಲ್ಲಿ, ಎಲ್ವಿವ್ ನಿಲ್ದಾಣದ ಹೊರಗೆ ಲೂಯಸ್ ಆರ್ಮ್‌ಸ್ಟ್ರಾಂಗ್ ಅವರ ‘ವಾಟ್ ಎ ವಂಡರ್‌ಫುಲ್ ವರ್ಲ್ಡ್’ ಹಾಡನ್ನು ಮಹಿಳೆಯೊಬ್ಬರು ನುಡಿಸಿದ್ದಾರೆ. ಸಾವಿರಾರು ಜನರು ಉಕ್ರೇನ್‌ನಿಂದ ಪಲಾಯನ ಮಾಡುತ್ತಿದ್ದಾರೆ ಮತ್ತು ಅನೇಕರು ಪೋಲೆಂಡ್‌ಗೆ ರೈಲುಗಳನ್ನು ಹತ್ತಲು ಪಶ್ಚಿಮ ಉಕ್ರೇನ್‌ನ ಎಲ್ವಿವ್ ರೈಲು ನಿಲ್ದಾಣದ ಹೊರಗೆ ರೈಲುಗಳಿಗಾಗಿ ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಿಳೆಯೊಬ್ಬರು ನುಡಿಸಿರುವ ಪಿಯಾನೋ ಹಲವರ ಕಣ್ಣಲ್ಲಿ ನೀರು ತರಿಸಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು, ಕಣ್ಣೀರು ತರಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ. Outside Lviv station, which is thronging with exhausted refugees fleeing war in eastern Ukraine, an accomplished pianist is playing “What a Wonderful World.” It’s hauntingly beautiful. pic.twitter.com/Xm5itr8jl7 — Andrew RC Marshall (@Journotopia) March 5, 2022