25 ಅಡಿ ಎತ್ತರದ ಗ್ರಿಲ್ನಲ್ಲಿ ಸಿಲುಕಿಕೊಂಡಿದ್ದ ಪುಟ್ಟ ಬಾಲಕಿಯನ್ನು ಸಿಐಎಸ್ಎಫ್ ಯೋಧ ರಕ್ಷಿಸಿದ ಘಟನೆ ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದಲ್ಲಿ ಭಾನುವಾರ ಸಂಜೆ ಸಂಭವಿಸಿದೆ.
ಭಾನುವಾರ ಸಂಜೆ ಆರು ಗಂಟೆ ಸುಮಾರಿಗೆ 25 ಅಡಿಯ ಎತ್ತರದ ಗ್ರಿಲ್ನಲ್ಲಿ 8 ವರ್ಷದ ಬಾಲಕಿ ಸಿಲುಕಿಕೊಂಡಿದ್ದಾಳೆ ಎಂಬ ಮಾಹಿತಿಯನ್ನು ಸಿಐಎಸ್ಎಫ್ ಪಡೆಗೆ ನೀಡಲಾಯ್ತು. ಮೆಟ್ರೋ ನಿಲ್ದಾಣದಲ್ಲಿ ಆಟವಾಡುತ್ತಿದ್ದ ವೇಳೆಯಲ್ಲಿ ಬಾಲಕಿ ಈ ಅಪಾಯಕ್ಕೆ ಸಿಲುಕಿದ್ದಳು. ಕೂಡಲೇ ಸ್ಥಳಕ್ಕಾಗಮಿಸಿದ ಸಿಐಎಸ್ಎಫ್ ಯೋಧರು ಬಾಲಕಿಯ ರಕ್ಷಣೆಗೆ ಮುಂದಾಗಿದ್ದಾರೆ.
ಬಾಲಕಿ ಸಿಲುಕಿಕೊಂಡಿದ್ದ ಸ್ಥಳವನ್ನು ತಲುಪುವಲ್ಲಿ ಯಶಸ್ವಿಯಾದ ಸಿಐಎಸ್ಎಫ್ ಯೋಧ ಆಕೆಯನ್ನು ಸುರಕ್ಷಿತವಾಗಿ ತಾಯಿಯ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.