alex Certify ಭಾವುಕರನ್ನಾಗಿಸುತ್ತೆ ತಾಯಿಯ ಮದುವೆ ದಿನ ಮಗಳು ಕೇಳಿದ ಉಡುಗೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವುಕರನ್ನಾಗಿಸುತ್ತೆ ತಾಯಿಯ ಮದುವೆ ದಿನ ಮಗಳು ಕೇಳಿದ ಉಡುಗೊರೆ

The Instagram video shows the girl handing her adoption papers to her mom's husband-to-be at their wedding.(instagram/@tjdukesfilms)

ಅನಾಥ ಮಗುವೊಂದನ್ನು ದತ್ತು ತೆಗೆದುಕೊಂಡು ಅದಕ್ಕೆ ಹೊಸ ಬದುಕು ನೀಡಲು ಎಷ್ಟೋ ದಂಪತಿಗಳು ಮುಂದಾಗ್ತಾರೆ. ನಿಜಕ್ಕೂ ಅದು ಅತ್ಯಂತ ಶ್ರೇಷ್ಠವಾದ ಕೆಲಸ. ಆದ್ರೆ ಒಮ್ಮೊಮ್ಮೆ ಮಗುವೇ ಸ್ವತಃ ಪೋಷಕರ ಬಳಿ ದತ್ತು ಪಡೆಯುವಂತೆ ಕೇಳಬೇಕಾದ ಸ್ಥಿತಿ ಬಂದೊದಗುತ್ತದೆ.

ಇಂಥದ್ದೇ ಕ್ಷಣವನ್ನು ನಟ ಮತ್ತು ನಿರ್ಮಾಪಕ ವಿಯೋಲಾ ಡೇವಿಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತನ್ನ ತಾಯಿಯ ಪತಿಯ ಬಳಿ ತನ್ನನ್ನು ದತ್ತು ಪಡೆಯುವಂತೆ ಬಾಲಕಿ ಕೇಳಿಕೊಂಡಿರುವ ವಿಡಿಯೋ ಇದು.

ತಾಯಿಯ ಮದುವೆಯ ಸಂದರ್ಭದಲ್ಲೇ ಬಾಲಕಿ ಈ ಮನವಿ ಮಾಡಿದ್ದಾಳೆ. ಎನ್ವಲಪ್‌ ಒಂದರಲ್ಲಿ ದತ್ತು ಸ್ವೀಕಾರಕ್ಕೆ ಸಂಬಂಧಪಟ್ಟ ದಾಖಲೆಗಳನ್ನೆಲ್ಲ ಬಾಲಕಿ ತೆಗೆದುಕೊಂಡು ಬಂದಿದ್ಲು. ತಾಯಿಯ ಜೊತೆ ವಿವಾಹಕ್ಕೆ ಸಿದ್ಧನಾಗಿದ್ದ ಫ್ರಾಂಕ್‌ ಎಂಬಾತನಿಗೆ ಅದನ್ನು ಕೊಟ್ಟಿದ್ದಾಳೆ.

ಈ ಕ್ಷಣಕ್ಕಾಗಿ ನಾನು 2555 ದಿನ ಕಾದಿದ್ದೇನೆ. ಫ್ರಾಂಕ್‌, ನೀನು ನನ್ನನ್ನು ಮಗಳಾಗಿ ದತ್ತು ಸ್ವೀಕಾರ ಮಾಡುತ್ತೀಯಾ ಎಂದು ಬಾಲಕಿ ಕೇಳಿದ್ದಾಳೆ. ಇದಕ್ಕೆ ಫ್ರಾಂಕ್‌ ಸಮ್ಮತಿಸಿದ್ದು, ಭಾವುಕನಾಗಿದ್ದಾನೆ. ಮದುವೆಗೆ ಸಾಕ್ಷಿಯಾಗಲು ಅಲ್ಲಿ ನೆರೆದಿದ್ದವರು ಕೂಡ ಭಾವುಕರಾಗಿದ್ದರು.

https://youtu.be/sGOOhMTi6FQ

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...